ದಸರಾ ಆನೆ ಅರ್ಜುನ ಸಾವನ್ನಪ್ಪಿದ್ಹೇಗೆ? ಮಾವುತನ ಬಾಯಲ್ಲಿ ಬಂತು ಸತ್ಯಾಂಶ

| Updated By: ರಮೇಶ್ ಬಿ. ಜವಳಗೇರಾ

Updated on: Dec 05, 2023 | 10:37 AM

ಹಾಸನ ಜಿಲ್ಲೆಯ ಸಕಲೇಶಪುರ (Sakleshpura) ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ನಡೆದ ಕಾಳಗದಲ್ಲಿ ದಸರಾ ಆನೆ ಅರ್ಜುನ ಮೃತಪಟ್ಟಿದೆ. ಆದ್ರೆ, ಅರ್ಜುನ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಮಾವುತನ ವಿಡಿಯೋ ಒಂದು ವೈರಲ್ ಆಗಿದೆ.

ಹಾಸನ, ಡಿಸೆಂಬರ್ 05): ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ (Mysuru Dasara) 8 ಬಾರಿ ಅಂಬಾರಿ ಹೊತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಮೆರೆಸಿದ್ದ ಅರ್ಜುನ (Arjuna) ಆನೆ ನಮ್ಮನ್ನಗಲಿದೆ. ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಹೊಟ್ಟೆಗೆ ತಿವಿದಿದ್ದರಿಂದ ಅರ್ಜುನ ಸಾವಿಗೀಡಾಗಿದ್ದಾನೆ ಎನ್ನಲಾಗುತ್ತಿದೆ. ಆದರೆ ಅರ್ಜುನ ಸಾವಿನ ಬಗ್ಗೆ ಬೇರೆ-ಬೇರೆ ರೀತಿಯಾದ ಚರ್ಚೆಗಳು ನಡೆದಿವೆ. ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದ ಅರ್ಜುನ ಬಲಿಯಾಗಿದ್ದಾನೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಇದರ ಮಧ್ಯೆ ಅರ್ಜುನ ಆನೆಯ ಮಾವುತನ ವಿಡಿಯೋಂದು ವೈರಲ್ ಆಗಿದೆ.