‘ಹಾಯ್ ನಾನ್ನ’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ಟಾಲಿವುಡ್ ನಟ ನಾನಿ
ನಟ ನಾನಿ ಅವರಿಗೆ ಕರ್ನಾಟಕದಲ್ಲೂ ಅಭಿಮಾನಿಗಳು ಇದ್ದಾರೆ. ಅವರು ಅಭಿನಯಿಸಿರುವ ‘ಹಾಯ್ ನಾನ್ನ’ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಈ ಸಿನಿಮಾದ ಪ್ರಚಾರದ ಸಲುವಾಗಿ ನಾನಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಲಾಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಟಾಲಿವುಡ್ನ ಖ್ಯಾತ ನಟ ನಾನಿ (Nani) ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ನಟಿಸಿರುವ ‘ಹಾಯ್ ನಾನ್ನ’ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆ ಆಗಲಿದೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣಲಿದೆ. ಕನ್ನಡಕ್ಕೂ ಡಬ್ ಆಗಿ ‘ಹಾಯ್ ನಾನ್ನ’ (Hi Nanna) ಸಿನಿಮಾ ರಿಲೀಸ್ ಆಗಲಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 4ರಂದು ಈ ಚಿತ್ರದ ಸುದ್ದಿಗೋಷ್ಠಿ ನಡೆಯಲಿದೆ. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಅವರು ಅಭಿನಯಿಸಿದ್ದಾರೆ. ಈ ವರ್ಷ ಬಿಡುಗಡೆ ಆಗಿದ್ದ ‘ದಸರಾ’ ಸಿನಿಮಾದಲ್ಲೂ ನಾನಿ ಅಬ್ಬರಿಸಿದ್ದರು. ‘ಹಾಯ್ ನಾನ್ನ’ ಮೂಲಕ ಈಗ ಇನ್ನೊಂದು ಕಥೆಯನ್ನು ಅವರು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos