ಜಂಬೂಸವಾರಿಗೆ ಸಿದ್ಧವಾದ ಚಿನ್ನದ ಅಂಬಾರಿ ಹಿನ್ನಲೆ ಏನು? ಇತಿಹಾಸ ತಿಳಿದುಕೊಳ್ಳಿ
ವಿಶ್ವವಿಖ್ಯಾತ ಜಂಬೂಸವಾರಿಯೊಂದಿಗೆ ಗತವೈಭವ ಮರುಕಳಿಸಲು ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ ಮೂಲಕ ಆನೆ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಅಷ್ಟಕ್ಕೂ ಜಂಬೂ ಸವಾರಿಗೆ ಸಿದ್ಧವಾದ ಚಿನ್ನದ ಅಂಬಾರಿ ಹಿನ್ನೆಲೆ ಏನು? ಇದರ ಇತಿಹಾಸವನ್ನು ತಿಳಿದುಕೊಳ್ಳಿ.
ನಾಡಹಬ್ಬ ಮೈಸೂರು ದಸರಾ (Mysore dasara) ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಮಾತು ಅಕ್ಷರಶಃ ನಿಜ. ಈ ಬಾರಿ ಬರದ ಆತಂಕದಲ್ಲಿ ಆರಂಭವಾದ ಮೈಸೂರು ದಸರಾ ಯಾವುದೇ ಅಡ್ಡಿ ಆತಂಕವಿಲ್ಲದೆ ಅಂತಿಮ ಹಂತ ತಲುಪಿದೆ. ಇಂದು ವಿಜಯದಶಮಿಯ ಸಂಭ್ರಮ ಸಡಗರ ಮನೆ ಮಾಡಿದ್ದು, ವಿಶ್ವವಿಖ್ಯಾತ ಜಂಬೂಸವಾರಿಯೊಂದಿಗೆ ಗತವೈಭವ ಮರುಕಳಿಸಲು ಕ್ಷಣಗಣನೆ ಆರಂಭವಾಗಿದೆ.. ಜಂಬೂ ಸವಾರಿ ಮೂಲಕ ಆನೆ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ದೇವಿಯ ಪ್ರತಿಮೆಯನ್ನು ಇಟ್ಟು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಅಷ್ಟಕ್ಕೂ ಜಂಬೂ ಸವಾರಿಗೆ ಸಿದ್ಧವಾದ ಚಿನ್ನದ ಅಂಬಾರಿ ಹಿನ್ನೆಲೆ ಏನು? ಇದರ ಇತಿಹಾಸವನ್ನು ತಿಳಿದುಕೊಳ್ಳಿ