ಸಿಎಂ ಪುತ್ರ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆಯೇ ಬ್ಲಾಕ್​​: ಕಾದುಕಾದು ಸುಸ್ತಾದ ಸವಾರರು

Edited By:

Updated on: Feb 19, 2026 | 8:28 PM

ಮೈಸೂರಿನ ಎಂಸಿ ಹುಂಡಿ ಬಳಿ ಸಿಎಂ ಪುತ್ರ ಡಾ. ಯತೀಂದ್ರ ಅವರ ಬೃಹತ್ ಕಟೌಟ್ ನಿಲ್ಲಿಸಲು ಮೈಸೂರು-ಟಿ ನರಸೀಪುರ ರಸ್ತೆಯನ್ನು ತಡೆಹಿಡಿಯಲಾಯಿತು. ಇದರಿಂದಾಗಿ ಹಲವು ವಾಹನಗಳು ರಸ್ತೆಯಲ್ಲೇ ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಯಿತು. ಈ ಅನಗತ್ಯ ರಸ್ತೆ ತಡೆ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮೈಸೂರು, ಫೆಬ್ರವರಿ 19: ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆಯನ್ನೇ ಬ್ಲಾಕ್ ಮಾಡಿದ ಪ್ರಸಂಗವೊಂದು ಸಿಎಂ ಸ್ವಕ್ಷೇತ್ರ ವರುಣಾದಲ್ಲಿ ನಡೆದಿದೆ. ಮೈಸೂರು-ಟಿ ನರಸೀಪುರ ಮುಖ್ಯ ರಸ್ತೆಯ ಎಂಸಿ ಹುಂಡಿ ಬಳಿ ಸುಮಾರು 50 ಅಡಿ ಎತ್ತರದ ಕಟೌಟ್​ ಅನ್ನು ಕಾಂಗ್ರೆಸ್​ ಕಾರ್ಯಕರ್ತರು ನಿಲ್ಲಿಸುತ್ತಿದ್ದರು. ಈ ಹಿನ್ನೆಲೆ ರಸ್ತೆ ಬ್ಲಾಕ್​ ಮಾಡಲಾಗಿದೆ. ಸುಮಾರು 20 ನಿಮಿಷ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಈ ವೇಳೆ ಜನ ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Feb 19, 2026 08:27 PM
Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More