ನಾಗರ ಪಂಚಮಿ: 15 ಅಡಿ ಉದ್ದದ ಹಾವು ಪ್ರತ್ಯಕ್ಷ, ಆತಂಕಗೊಂಡ ಕುಟುಂಬಸ್ಥರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2023 | 7:18 PM

ಸೋಮವಾರದಂದು ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬದ ಸಡಗರ ಮನೆ ಮಾಡಿತ್ತು. ಈ ವೇಳೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ತೋಟದ ಮನೆಯೊಂದರಲ್ಲಿ ಸುಮಾರು 15 ಅಡಿ ಉದ್ದದ ಕೆರೆ ಹಾವು ಪ್ರತ್ಯಕ್ಷವಾಗಿದ್ದು, ಜನರು ಆತಂಕಗೊಂಡಿದ್ದರು.

ಬಾಗಲಕೋಟೆ, ಆಗಸ್ಟ್​​ 21: ಸೋಮವಾರದಂದು ಜಿಲ್ಲಾದ್ಯಂತ ನಾಗರ ಪಂಚಮಿ ಹಬ್ಬದ ಸಡಗರ ಮನೆ ಮಾಡಿತ್ತು. ಈ ವೇಳೆ ಜಿಲ್ಲೆಯ ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ತೋಟದ ಮನೆಯೊಂದರಲ್ಲಿ ಸುಮಾರು 15 ಅಡಿ ಉದ್ದದ ಕೆರೆ ಹಾವು (snake) ಪ್ರತ್ಯಕ್ಷವಾಗಿದ್ದು, ಜನರು ಆತಂಕಗೊಂಡಿದ್ದರು. ನಾಗನಗೌಡ ಪಾಟೀಲ ಎಂಬುವವರ ತೋಟದ ಮನೆಯಲ್ಲಿ ಹಾವು ಪ್ರತ್ಯಕ್ಷವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಬಾಬುಸಾಬ ನದಾಫ್​ ಹಾವು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ನಾಗರಪಂಚಮಿ ದಿನ ಹಾವು ಕಂಡು ಕುಟುಂಬಸ್ಥರು ಆತಂಕಗೊಂಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on