Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಕ್ತ ಚಿಂತನೆ, ಅಧ್ಯಯನವಿಲ್ಲದೆ ಮತ್ತು ಅಗತ್ಯವಿರುವ ಇನ್ಫ್ರಾಸ್ಟ್ರಕ್ಚರ್ ಒದಗಿಸದೆ ಹೊಸ ಶಿಕ್ಷಣ ನೀತಿಯನ್ನು ಸಿದ್ಧಪಡಿಸಲಾಗಿದೆ: ಡಾ ಎಂಸಿ ಸುಧಾಕರ್, ಸಚಿವ

ಸೂಕ್ತ ಚಿಂತನೆ, ಅಧ್ಯಯನವಿಲ್ಲದೆ ಮತ್ತು ಅಗತ್ಯವಿರುವ ಇನ್ಫ್ರಾಸ್ಟ್ರಕ್ಚರ್ ಒದಗಿಸದೆ ಹೊಸ ಶಿಕ್ಷಣ ನೀತಿಯನ್ನು ಸಿದ್ಧಪಡಿಸಲಾಗಿದೆ: ಡಾ ಎಂಸಿ ಸುಧಾಕರ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2023 | 8:14 PM

ರಾಜ್ಯದ ಹೆಚ್ಚಿನ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಪಡೆದು ತರಗತಿಗಳನ್ನು ನಡೆಸಲಾಗುತ್ತಿದೆ ಇನ್ನು ಪರಿಣಿತ ಬೋಧಲಕರನ್ನು ಎಲ್ಲಿಂದ ತರೋದು? ಹೊಸ ಶಿಕ್ಷಣ ನೀತಿಯಡಿ ರಾಜ್ಯಶಾಸ್ತ್ರ ವಿಷಯವನ್ನು ಜಾತ್ಯಾತೀತ ಅಂಶಗಳಿಗೆ ವಿರುದ್ಧವಾದ ಪಠ್ಯವನ್ನು ತಯಾರು ಮಾಡಲಾಗಿದೆ ಎಂದು ಸಚಿವ ಡಾ ಎಂ ಸಿ ಸುಧಾಕರ್ ಹೇಳಿದರು.

ಬೆಂಗಳೂರು: ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು (New Education Policy) ರಾಜ್ಯ ಸರ್ಕಾರ ಯಾಕೆ ವಿರೋಧಿಸುತ್ತಿದೆ ಮತ್ತು ಅನುಷ್ಠಾನಗೊಳಿಲು ಮುಂದಾಗುತ್ತಿಲ್ಲ ಅನ್ನೋದನ್ನು ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ (Dr MC Sudhakar) ವಿವರಿಸಿದರು. ನಗರದಲ್ಲಿಂದು ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಯಾವುದೇ ಒಂದು ನೀತಿಯನ್ನು ರೂಪಿಸಿ ಜಾರಿಗೊಳಿಸಬೇಕಾದರೆ ಸಮಗ್ರವಾದ ಅಧ್ಯಯನ (comprehensive study) ಮತ್ತು ಚಿಂತನೆ ಬೇಕಾಗುತ್ತದೆ. ಅದೇ ನಿಯಮ ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಕೇಂದ್ರ ಸರ್ಕಾರ ಯಾವುದೇ ರೀತಿಯ ಪೂರ್ವಾಲೋಚನೆ ಇಲ್ಲದೆ, ಜಾರಿಗೆ ಸೂಕ್ತವಾದ ಇನ್ಫ್ರಾಸ್ಟ್ರಕ್ಚರ್, ಬೋಧಕ ವರ್ಗ ಒದಗಿಸದೆ ಮತ್ತು ಅವಶ್ಯವಿರುವ ಅನುದಾನ ಕೂಡ ಬಿಡುಗಡೆ ಮಾಡದೆ ಹೊ ಶಿಕ್ಷಣ ನೀತಿಯನ್ನು ರೂಪಿಸಿದ್ದು ಭೌತಿಕವಾಗಿ ಅದನ್ನು ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದರು. ರಾಜ್ಯದ ಹೆಚ್ಚಿನ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಸೇವೆ ಪಡೆದು ತರಗತಿಗಳನ್ನು ನಡೆಸಲಾಗುತ್ತಿದೆ ಇನ್ನು ಪರಿಣಿತ ಬೋಧಲಕರನ್ನು ಎಲ್ಲಿಂದ ತರೋದು? ಹೊಸ ಶಿಕ್ಷಣ ನೀತಿಯಡಿ ರಾಜ್ಯಶಾಸ್ತ್ರ ವಿಷಯವನ್ನು ಜಾತ್ಯಾತೀತ ಅಂಶಗಳಿಗೆ ವಿರುದ್ಧವಾದ ಪಠ್ಯವನ್ನು ತಯಾರು ಮಾಡಲಾಗಿದೆ ಎಂದು ಸಚಿವ ಡಾ ಎಂ ಸಿ ಸುಧಾಕರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ