ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?

Edited By:

Updated on: Mar 06, 2026 | 8:09 AM

ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಈಗ ನಾಗ ಚೈತನ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಅವರು ಜಾರಿ ಬಿದ್ದಿದ್ದನ್ನು ನೀವು ಕಾಣಬಹುದು. ಇದು ಅವರಿಗೆ ಮುಜುಗರ ತಂದಿದೆ.

ನಾಗ ಚೈತನ್ಯ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೋಗಿ ಜಾರಿ ಬಿದ್ದ ಘಟನೆಯೊಂದು ನಡೆದಿದೆ. ಅವರ ಮುಂದಿನ ಸಿನಿಮಾ ವೃಷಕರ್ಮ ಚಿತ್ರದ ಈವೆಂಟ್ ಅಲ್ಲಿ ಭಾಗಿ ಆದರು. ಅವರು ಬಂದು ಕುರ್ಚಿ ಮೇಲೆ ಕೂರಲು ಪ್ರಯತ್ನಿಸಿದರು ಮತ್ತು ಅದು ಹಿಂದಕ್ಕೆ ಭಾಗಿತು. ಇದರಿಂದ ಅವರು ಬಿದ್ದರು. ಈ ಪರಿಸ್ಥಿತಿಯನ್ನು ಅವರು ನಗುತ್ತಲೇ ಹ್ಯಾಂಡಲ್ ಮಾಡಿದರು. ಅವರ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಕೆಲವೊಮ್ಮೆ ಸೆಲೆಬ್ರಿಟಿಗಳು ಈ ರೀತಿ ಆದಾಗ ಸಿಟ್ಟಾಗುತ್ತಾರೆ. ಅಲ್ಲಿದ್ದವರನ್ನು ಬಯ್ಯುತ್ತಾರೆ. ಆದರೆ, ಅವರು ಹಾಗೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us