Naga Panchami: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರಪಂಚಮಿ ಸಂಭ್ರಮ; ದೇವಸ್ಥಾನಕ್ಕೆ ಆಗಮಿಸುತ್ತಿರುವ ಸಾವಿರಾರು ಭಕ್ತರು

ಶ್ರೀ ಕ್ಷೇತ್ರ ಘಾಟಿ‌ ಸುಬ್ರಮಣ್ಯದಲ್ಲಿ ನಾಗರ ಪಂಚಪಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಬೆಳ್ಳಂಬೆಳಗ್ಗೆಯೇ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೆ ನಾಗನಕಲ್ಲಿಗೆ ಹಾಲೆರೆದು ನಾಗರಪಂಚಮಿ ಆಚರಿಸುತ್ತಿದ್ದಾರೆ.

TV9kannada Web Team

| Edited By: Rakesh Nayak

Aug 02, 2022 | 9:41 AM

ಬೆಂಗಳೂರು ಗ್ರಾಮಾಂತರ: ಇಂದು ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ನಾಗರ ಪಂಚಮಿಯ ಹಬ್ಬವನ್ನ ಆಚರಿಸಲಾಗುತ್ತಿದೆ. ಅದರಂತೆ ಶ್ರೀ ಕ್ಷೇತ್ರ ಘಾಟಿ‌ ಸುಬ್ರಮಣ್ಯದಲ್ಲೂ ಹಬ್ಬದ ಪ್ರಯುಕ್ತ ವಿಶೇಷ ಹೂಗಳಿಂದ ನರಸಿಂಹ ಸಮೇತ ಸುಬ್ರಮಣ್ಯನಿಗೆ ಅಲಂಕಾರ ಮಾಡಲಾಗಿದೆ. ಅಲ್ಲದೆ ಭಕ್ತಿಯಿಂದ ಹುತ್ತ ಹಾಗೂ ನಾಗನಕಲ್ಲಿಗೆ ಹಾಲೆರೆದು ನಾಗರ ಪಂಚಮಿ ಆಚರಿಸಲಾಗುತ್ತಿದ್ದು, ಬೆಳ್ಳಂಬೆಳಗ್ಗೆ ದೇವಾಲಯದತ್ತ ಸಾವಿರಾರು ಭಕ್ತರ ಆಗಮಿಸಿದ್ದಾರೆ. ಬೆಂಗಳೂರು ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು, ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ.

Follow us on

Click on your DTH Provider to Add TV9 Kannada