ನಾಗ್ಪುರದ ರಸ್ತೆಗಳನ್ನು ಭಿಕ್ಷುಕರಿಂದ ಮುಕ್ತಗೊಳಿಸಲು ಮತ್ತು ಅವರಿಗೆ ಸ್ವಾಭಿಮಾನದ ಬದುಕು ನೀಡಲು ಪೊಲೀಸ್ ಇಲಾಖೆ ಸಿದ್ಧವಾಗಿದೆ

|

Updated on: Mar 18, 2023 | 8:08 AM

ಭಿಕ್ಷುಕರು ಸ್ವಾಭಿಮಾನದಿಂದ ಬದುಕಲು ಪುನರ್ವಸತಿ ಕೇಂದ್ರದಲ್ಲಿ ಅವರಲ್ಲಿರುವ ಕೌಶಲ್ಯಗಳಿಗೆ ಅನುಗುಣವಾಗಿ ತರಬೇತಿಯನ್ನು ಒದಗಿಸಲಾಗುವುದು. ಅವರಲ್ಲಿ ಸ್ವಾಭಿಮಾನ ಪ್ರಜ್ಞೆ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಭಿಕ್ಷುಕರ ಪುನರ್ವಸತಿ ಯೋಜನೆಯ ಯೋಜನಾ ನಿರ್ದೇಶಕ ದೇವೇಂದ್ರ ಕುಮಾರ್ ಶಿವಸಾಗರ ಹೇಳುತ್ತಾರೆ.

ನಾಗ್ಪುರ: ನಗರ ಯಾವುದೇ ಆಗಿರಲಿ ಅಲ್ಲಿನ ಸಿಗ್ನಲ್ ಗಳ ಬಳಿ, ಬೀದಿಗಳಲ್ಲಿ, ಭಿಕ್ಷುಕರು (beggars) ಕಾಣಿಸುತ್ತಾರೆ. ಅವರೊಂದಿಗೆ ಅಷ್ಟೇ ಸಂಖ್ಯೆಯ ಮಂಗಳಮುಖಿಯರನ್ನು (transgenders) ಸಹ ನೋಡಬಹುದು. ನಾವಿಲ್ಲಿ ಚರ್ಚಿಸುತ್ತಿರೋದು ಮಹಾರಾಷ್ಟ್ರ ರಾಜ್ಯದ ಎರಡನೇ ರಾಜಧಾನಿ ಎನಿಸಿಕೊಂಡಿರುವ ನಾಗ್ಪುರ ನಗರದ (Nagpur city) ಭಿಕ್ಷುಕರ ಬಗ್ಗೆ. ನಗರದ ಪೊಲೀಸರು ಮಹಾರಾಷ್ಟ್ರ ಭಿಕ್ಷಾಟನೆ ತಡೆ ಕಾಯ್ದೆ (MPBA) ಅಡಿ ರಸ್ತೆಗಳನ್ನು ಭಿಕ್ಷುಕರಿಂದ ಮುಕ್ತ ಮಾಡಲು ಅವರನ್ನೆಲ್ಲ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸುವ ಯೋಜನೆ ಮಾಡಿಕೊಂಡಿದ್ದಾರೆ.

‘ಟ್ರಾಫಿಕ್ ಜಂಕ್ಷನ್, ಫುಟ್ ಪಾತ್ ಮತ್ತು ಟ್ರಾಫಿಕ್ ಐಲ್ಯಾಂಡ್ ಮೊದಲಾದ ಕಡೆಗಳಲೆಲ್ಲ ಭಿಕ್ಷುಕರು ತಮ್ಮ ಕುಟುಂಬಗಳೊಂದಿಗೆ ತಿರುಗುಡುತ್ತಾ ಜನರಿಂದ ಬಲವಂತವಾಗಿ ಹಣ ವಸೂಲಿ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಕೆಲವರು ರಸ್ತೆಗಳ ಬದಿಯಲ್ಲೇ ಆಹಾರ ಸಹ ಬೇಯಿಸಿಕೊಳ್ಳುತ್ತಾರೆ. ಸಾರ್ವಜನಿಕರಿಂದ ಪದೇಪದೆ ದೂರುಗಳು ಬಂದ ಮೇಲೆ ಅವರಿಗೆ ನಾವು ಈಗಾಗಲೇ ನೊಟೀಸ್ ಗಳನ್ನು ನೀಡಿದ್ದೇವೆ,’ ಎಂದು ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳುತ್ತಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಗಡಿಭಾಗದ ನಮ್ಮ ಗ್ರಾಮಗಳನ್ನು ಕಬ್ಜಾ ಮಾಡಿಕೊಳ್ಳಲು ಹುನ್ನಾರ ನಡೆಸಿದೆ, ನಮ್ಮ ಸಂಸದರು ನಿದ್ರಿಸುತ್ತಿದ್ದಾರೆಯೇ? ಪ್ರಿಯಾಂಕ್ ಖರ್ಗೆ

ನಗರದಲ್ಲಿ ನಿರಾಶ್ರಿತರು ಮತ್ತು ನಿರ್ಗತಿಕರಿಗಾಗಿ ಹಲವಾರು ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಆಯುಕ್ತರು ಹೇಳುತ್ತಾರೆ.

‘ನಗರ ಸಭೆ, ಸಾಮಾಜಿಕ ನ್ಯಾಯ ಇಲಾಖೆ ಮತ್ತು ಇತರ ಆಡಳಿತಾತ್ಮಕ ವಿಭಾಗಗಳು ನಿರ್ಗತಿಕರು ಮತ್ತು ಭಿಕ್ಷುಕರಿಗಾಗಿ ಹಲವಾರು ಆಶ್ರಯ ಧಾಮಗಳನ್ನು ನಿರ್ಮಿಸಿವೆ. ನಗರದಲ್ಲಿರುವ ಎಲ್ಲ ಭಿಕ್ಷುಕರನ್ನು ಕೇಂದ್ರಗಳಿಗೆ ಶಿಫ್ಟ್ ಮಾಡುವ ವ್ಯವಸ್ಥೆಯನ್ನು ನಾವು ಮಾಡಿಕೊಳ್ಳುತ್ತಿದ್ದೇವೆ. ಆಹಾರ, ಔಷಧೋಪಾಚಾರ ಸೇರಿದಂತೆ ಒಂದು ಸಾಮಾನ್ಯ ಜೀವನ ನಡೆಸಲು ಬೇಕಾಗುವ ಎಲ್ಲ ಸವಲತ್ತುಗಳನ್ನು ಅವರಿಗೆ ಒದಗಿಸಲಾಗುವುದು,’ ಎಂದು ಅಮಿತೇಶ್ ಕುಮಾರ್ ಹೇಳುತ್ತಾರೆ.

ಭಿಕ್ಷುಕರು ಸ್ವಾಭಿಮಾನದಿಂದ ಬದುಕಲು ಪುನರ್ವಸತಿ ಕೇಂದ್ರದಲ್ಲಿ ಅವರಲ್ಲಿರುವ ಕೌಶಲ್ಯಗಳಿಗೆ ಅನುಗುಣವಾಗಿ ತರಬೇತಿಯನ್ನು ಒದಗಿಸಲಾಗುವುದು. ಅವರಲ್ಲಿ ಸ್ವಾಭಿಮಾನ ಪ್ರಜ್ಞೆ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಭಿಕ್ಷುಕರ ಪುನರ್ವಸತಿ ಯೋಜನೆಯ ಯೋಜನಾ ನಿರ್ದೇಶಕ ದೇವೇಂದ್ರ ಕುಮಾರ್ ಶಿವಸಾಗರ ಹೇಳುತ್ತಾರೆ.

ಇದನ್ನೂ ಓದಿ: ಭಿಕ್ಷುಕರಿಗೆ 1 ರೂಪಾಯಿಯೂ ಕೊಡದೇ ಮುಂದೆ ಸಾಗಿದ ಸೈಫ್​ ಮಗ ಇಬ್ರಾಹಿಂ ಅಲಿ ಖಾನ್; ವಿಡಿಯೋ ವೈರಲ್​

‘ಭಿಕ್ಷೆ ಬೇಡಿ ಹಣ ಪಡೆಯುವುದು ಬಹಳ ಸುಲಭ ಆದರೆ, ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ತುಂಬುವುದು ಅಷ್ಟು ಸುಲಭವಲ್ಲ, ಅದು ಸವಾಲುಗಳಿಂದ ಕೂಡಿದ ಕಠಿಣ ಕೆಲಸವಾಗಿದೆ,’ ಎಂದು ಶಿವಸಾಗರ ಹೇಳುತ್ತಾರೆ.

ಇಲ್ಲಿ ಕಾಣುವ ಪುನರ್ವಸತಿ ಕೇಂದ್ರದಲ್ಲಿರುವವರ ಪೈಕಿ ಅತೀವ ಬಡತನ ಮತ್ತು ಅವಕಾಶವಂಚಿತ ಕುಟುಂಬಗಳ ಹಿನ್ನೆಲೆಯಿಂದ ಬಂದವರೇ ಜಾಸ್ತಿ. ದುಡಿದು ತಿನ್ನುವ ಅವಕಾಶ ಸಿಕ್ಕರೆ, ಭಿಕ್ಷೆ ಬೇಡುವುದನ್ನು ನಿಲ್ಲಿಸುವುದಾಗಿ ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ