Pakistan: ಮಿತ್ರ ರಾಷ್ಟ್ರಗಳು ಕೂಡ ನಮ್ಮನ್ನು ಭಿಕ್ಷುಕರು ಎಂದು ಭಾವಿಸಿದೆ: ಪಾಕ್ ಪ್ರಧಾನಿ ಷರೀಫ್
ನಮ್ಮ ಮಿತ್ರ ರಾಷ್ಟ್ರಗಳು ಕೂಡ ನಮ್ಮನ್ನು ಭಿಕ್ಷುಕರು ಎಂದು ಭಾವಿಸುತ್ತವೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಶೆಹಬಾಜ್ ಷರೀಫ್ ಸಮಾವೇಶದಲ್ಲಿ ಮಾತನಾಡುವಾಗ ದೇಶದ ಪ್ರಕ್ಷುಬ್ಧ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ.
ಪಾಕಿಸ್ತಾನ: ನಮ್ಮ ಮಿತ್ರ ರಾಷ್ಟ್ರಗಳು ಕೂಡ ನಮ್ಮನ್ನು ಭಿಕ್ಷುಕರು ಎಂದು ಭಾವಿಸುತ್ತವೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಶೆಹಬಾಜ್ ಷರೀಫ್ ಸಮಾವೇಶದಲ್ಲಿ ಮಾತನಾಡುವಾಗ ದೇಶದ ಪ್ರಕ್ಷುಬ್ಧ ಆರ್ಥಿಕತೆಯ ಬಗ್ಗೆ ಮಾತನಾಡಿದ್ದಾರೆ. ಇಂದು, ನಾವು ಯಾವುದೇ ಸೌಹಾರ್ದ ದೇಶಕ್ಕೆ ಹೋದಾಗ ಅಥವಾ ಫೋನ್ ಮಾಡಿದಾಗ, ನಾವು ಹಣಕ್ಕಾಗಿ ಭಿಕ್ಷೆ ಬೇಡಲು ಬಂದಿದ್ದೇವೆ ಎಂದು ಅವರು ಭಾವಿಸುತ್ತಾರೆ ಎಂದು ಅವರು ಹೇಳಿದರು.
ದೇಶದಲ್ಲಿ ಭಾರಿ ಪ್ರವಾಹದಿಂದ ಉಂಟಾದ ವಿನಾಶದ ಬಗ್ಗೆ ಮಾತನಾಡುತ್ತಾ ಪಿಎಂ ಶೆಹಬಾಜ್ ಷರೀಫ್ ಪ್ರವಾಹದ ಮೊದಲ ನಮ್ಮ ಆರ್ಥಿಕತೆಯು ಹೇಗಾದರೂ ಹೆಣಗಾಡುತ್ತಿದ್ದೇವು ಈಗ ಪ್ರವಾಹ ಬಂದು ಇನ್ನಷ್ಟು ಹದಗೆಡಿಸಿತು. ನಾನು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಆರ್ಥಿಕ ಕುಸಿತ ಅಂಚಿನಲ್ಲಿದೆ ಎಂದು ಹೇಳಿದರು. ಷರೀಫ್ ಅವರ ಸರ್ಕಾರವು ಕಠಿಣ ಪರಿಶ್ರಮದ ಮೂಲಕ ದೇಶವನ್ನು ಉಳಿಸಿದೆ ಮತ್ತು ಆರ್ಥಿಕ ಅಸ್ಥಿರತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದೆ ಎಂದು ಔಟ್ಲೆಟ್ ದಿ ಡಾನ್ ವರದಿ ಮಾಡಿದೆ.
ಈ ಹಿಂದಿನ ಪಿಟಿಐ ಸರ್ಕಾರವನ್ನು ಪಾಕ್ ಪ್ರಧಾನಿ ಪರೋಕ್ಷವಾಗಿ ದೂಷಿಸಿದ್ದಾರೆ. ಇಮ್ರಾನ್ ಖಾನ್ ಅವರು ಹಣದುಬ್ಬರ ಗಗನಕ್ಕೇರುತ್ತಿರುವಂತೆ ಮಾಡಿದ್ದಾರೆ. ಅನೇಕ ಒಪ್ಪಂದದ ನಿಯಮಗಳನ್ನು ಹಿಂದಿನ ಸರ್ಕಾರ ಉಲ್ಲಂಘಿಸಿದೆ ಎಂದು ಹೇಳಿದರು. ಅಂತರಾಷ್ಟ್ರೀಯ ಹಣಕಾಸು ನಿಧಿ(IMF) ಕಠಿಣ ಷರತ್ತುಗಳನ್ನು ಒಪ್ಪಿಕೊಳ್ಳುವುದನ್ನು ಒಪ್ಪಿಕೊಳ್ಳ ಸಾಧ್ಯವಿಲ್ಲ ಎಂದಿದ್ದಾರೆ.
ಪಾಕಿಸ್ತಾನಕ್ಕಿಂತ ಸಣ್ಣ ಆರ್ಥಿಕತೆಗಳು ದೇಶವನ್ನು ಮೀರಿಸಿದೆ ಮತ್ತು ನಾವು ಕಳೆದ 75 ವರ್ಷಗಳಿಂದ ಭಿಕ್ಷಾಪಾತ್ರೆ ಹಿಡಿದು ಅಲೆದಾಡುತ್ತಿದ್ದೇವೆ ಎಂದು ಪ್ರಧಾನಿ ಷರೀಫ್ ಹೇಳಿದರು. 75 ವರ್ಷಗಳ ನಂತರ ಪಾಕಿಸ್ತಾನವು ಇಂದು ಎಲ್ಲಿ ನಿಂತಿದೆ? ನಾವು ಎಲ್ಲಾ ಸಮಯದಲ್ಲೂ ವೃತ್ತದಲ್ಲಿ ಚಲಿಸುತ್ತಿರುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ. ಮುಂಬರುವ ಚಳಿಗಾಲದಲ್ಲಿ ಅನಿಲ ಬಿಕ್ಕಟ್ಟು ಉಂಟಾಗಬಹುದು ಎಂದು ಪ್ರಧಾನಿ ಎಚ್ಚರಿಕೆ ನೀಡಿದರು, ನಾವು ಗ್ಯಾಸ್ ವ್ಯವಸ್ಥೆ ಮಾಡಲು ಹೆಣಗಾಡುತ್ತಿದ್ದೇವೆ ಎಂದು ಹೇಳಿದರು. ಮಳೆ ಮತ್ತು ಪ್ರವಾಹವು ಜಗತ್ತಿನಲ್ಲಿ ಬೇರೆಲ್ಲಿಯೂ ಕಂಡುಬರದ ಪ್ರಮಾಣದಲ್ಲಿ ದೇಶದಲ್ಲಿ ವಿನಾಶವನ್ನು ಉಂಟುಮಾಡಿದೆ ಎಂದು ಹೇಳಿದರು.
Published On - 12:57 pm, Fri, 16 September 22