ಕಿರ್ಗಿಝ್ ಅಧ್ಯಕ್ಷರಿಗಾಗಿ ಕಾದು ನಿಂತ ವ್ಲಾಡಿಮಿರ್ ಪುಟಿನ್ ; ​​ರಷ್ಯಾ ಅಧ್ಯಕ್ಷರಿಗಾದ ಅವಮಾನವನ್ನು ಗೇಲಿ ಮಾಡಿದ ನೆಟ್ಟಿಗರು

ಪುಟಿನ್ ಮತ್ತೊಮ್ಮೆ ಸಾರ್ವಜನಿಕವಾಗಿ ಅವಮಾನಕ್ಕೊಳಗಾದರು. ಹಿಂದೆ ಕ್ರೆಮ್ಲಿನ್ ಮುಖ್ಯಸ್ಥರು ವಿಶ್ವ ನಾಯಕರು ಅವನಿಗಾಗಿ ಕಾಯುವಂತೆ ಮಾಡುತ್ತಿದ್ದರು. ಈಗ ಕಿರ್ಗಿಸ್ತಾನ್ ಅಧ್ಯಕ್ಷರು ಪುಟಿನ್ ಅವರೊಂದಿಗಿನ ಸಭೆಗೆ ತಡವಾಗಿ ಬರುತ್ತಿದ್ದಾರೆ..

ಕಿರ್ಗಿಝ್ ಅಧ್ಯಕ್ಷರಿಗಾಗಿ ಕಾದು ನಿಂತ ವ್ಲಾಡಿಮಿರ್ ಪುಟಿನ್ ; ​​ರಷ್ಯಾ ಅಧ್ಯಕ್ಷರಿಗಾದ ಅವಮಾನವನ್ನು ಗೇಲಿ ಮಾಡಿದ ನೆಟ್ಟಿಗರು
ವ್ಲಾಡಿಮಿರ್ ಪುಟಿನ್
TV9kannada Web Team

| Edited By: Rashmi Kallakatta

Sep 16, 2022 | 4:33 PM

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಕಿರ್ಗಿಝ್ ಅಧ್ಯಕ್ಷ ಸದಿರ್ ಜಪರೋವ್ (Sadyr Japarov ) ಅವರನ್ನು ಭೇಟಿಯಾಗುವ ಮೊದಲು ಕಾಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ವೇಳೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಜಪರೋವ್ ಕಾಯುವಂತೆ ಮಾಡಿ, ಅವಮಾನವೆಸಗಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಉಕ್ರೇನಿಯನ್ ಅಧಿಕಾರಿ ಆಂಟನ್ ಗೆರಾಶ್ಚೆಂಕೊ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಪುಟಿನ್ ಮತ್ತೊಮ್ಮೆ ಸಾರ್ವಜನಿಕವಾಗಿ ಅವಮಾನಕ್ಕೊಳಗಾದರು. ಹಿಂದೆ ಕ್ರೆಮ್ಲಿನ್ ಮುಖ್ಯಸ್ಥರು ವಿಶ್ವ ನಾಯಕರು ಅವನಿಗಾಗಿ ಕಾಯುವಂತೆ ಮಾಡುತ್ತಿದ್ದರು. ಈಗ ಕಿರ್ಗಿಸ್ತಾನ್ ಅಧ್ಯಕ್ಷರು ಪುಟಿನ್ ಅವರೊಂದಿಗಿನ ಸಭೆಗೆ ತಡವಾಗಿ ಬರುತ್ತಿದ್ದಾರೆ ಎಂದು ಆಂಟನ್ ಗೆರಾಶ್ಚೆಂಕೊ ಟ್ವೀಟ್ ಮಾಡಿದ್ದಾರೆ. ರಿಯಾ ಕ್ರೆಮ್ಲಿನ್ ಪೂಲ್ ಚಿತ್ರೀಕರಿಸಿದ ವಿಡಿಯೊದಲ್ಲಿ ವ್ಲಾಡಿಮಿರ್ ಪುಟಿನ್ ಸುಮಾರು 30 ಸೆಕೆಂಡುಗಳ ಹಿಂದಿಯೇ ನಿಗದಿತ ಸ್ಥಳಕ್ಕೆ ಬಂದು ಕಿರ್ಗಿಸ್ತಾನ್ ಅಧ್ಯಕ್ಷರಿಗಾಗಿ ನಿಂತು ಕಾಯುತ್ತಿದ್ದರು. ಆ ಕ್ಷಣದಲ್ಲಿ ಅಲ್ಪಾವಧಿಯ ಎಡವಟ್ಟನ್ನು ನಿಭಾಯಿಸಲು ಅವರು ಶ್ರಮಿಸುತ್ತಿರುವುದು ಕಂಡುಬಂದಿದೆ. ಕೊನೆಗೆ ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಜಪರೋವ್ ಆಗಮಿಸಿ ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿದರು.

ರಷ್ಯಾದ ಅಧ್ಯಕ್ಷರಿಗಾದ ಹಲವರು ಟೀಕಿಸಿದ್ದ ಇನ್ನು ಕೆಲವರು ಗೇಲಿ ಮಾಡಿದ್ದಾರೆ . ಕೆಲವರು ಈ ಘಟನೆಯನ್ನು “ಪುಟಿನ್​​ಗೆ  ಈಗ ಕಾಯುವ ಸರದಿ” ಎಂದು ಕರೆದರು, ಇನ್ನೊಬ್ಬ ವ್ಯಕ್ತಿ, ಕಿರ್ಗಿಸ್ತಾನ್ ಅಧ್ಯಕ್ಷರು ನಿಮ್ಮನ್ನು ಕಾಯುವಂತೆ ಮಾಡಿದಾಗ, ಸ್ವರ್ಗದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದಿದ್ದಾರೆ.

ಆದಾಗ್ಯೂ, ಪುಟಿನ್ ಅವರನ್ನು ಸಭೆಯಲ್ಲಿ ಕಾಯುವಂತೆ ಮಾಡಿದ್ದು ಇದೇ ಮೊದಲಲ್ಲ. ತಿಂಗಳ ಹಿಂದೆಯೂ ಇದೇ ರೀತಿಯ ಘಟನೆಯೊಂದು ನಡೆದಿತ್ತು.ಜುಲೈನಲ್ಲಿ ಟೆಹ್ರಾನ್ ಮಾತುಕತೆಗೆ ಮುಂಚಿತವಾಗಿ ತನ್ನ ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ತಡವಾಗಿ ಆಗಮಿಸಿದ ಕಾರಣ ವ್ಲಾಡಿಮಿರ್ ಪುಟಿನ್ 50 ಸೆಕೆಂಡುಗಳ ಕಾಲ ಮಾಧ್ಯಮದ ಮುಂದೆ ಕಾದು ನಿಂತರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಗಮನ ಸೆಳೆದಿತ್ತು. ಈ ಹಿಂದೆ, ಪುಟಿನ್ ಸಭೆಯ ಮೊದಲು ವಿಶ್ವ ನಾಯಕರು ತನಗಾಗಿ ಕಾಯುವಂತೆ ಮಾಡುತ್ತಿದ್ದರು. ಆದಾಗ್ಯೂ, ಆಗಾಗ್ಗೆ ಸಂಭವಿಸುವ ಘಟನೆಯು ರಷ್ಯಾದ ಪ್ರಭಾವವನ್ನು ಕಡಿಮೆ ಮಾಡಲು ಅಸ್ಪಷ್ಟ ಸೂಚನೆಗಳನ್ನು ನೀಡುತ್ತದೆ.

ಹಲವಾರು ನಾಯಕರು ಮತ್ತು ಗಣ್ಯ ವ್ಯಕ್ತಿಗಳು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ವಿಡಿಯೊ ಹಂಚಿಕೊಳ್ಳುವ ಮೂಲಕ ಘಟನೆಯನ್ನು ಹೈಲೈಟ್ ಮಾಡಿದ್ದಾರೆ. ಉಕ್ರೇನ್‌ನ ಆಕ್ರಮಣದ ನಂತರ ರಷ್ಯಾದ ಮೇಲೆ ಬದಲಾಗುತ್ತಿರುವ ಜಾಗತಿಕ ನಿಲುವಿನ ಸೂಚನೆ ಇದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada