Queen Elizabeth II Funeral: ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ: ಯಾರ್ಯಾರು ಭಾಗಿ?

ಬ್ರಿಟನ್ ರಾಣಿ ಎಲಿಜಬೆತ್ II ತೀವ್ರ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯು ಸೆ.19ಕ್ಕೆ ನಡೆಯಲಿದ್ದು, ಯಾರ್ಯಾರಿಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

Queen Elizabeth II Funeral: ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ: ಯಾರ್ಯಾರು ಭಾಗಿ?
Queen Elizabeth
Follow us
TV9 Web
| Updated By: ನಯನಾ ರಾಜೀವ್

Updated on:Sep 16, 2022 | 12:51 PM

ಬ್ರಿಟನ್ ರಾಣಿ ಎಲಿಜಬೆತ್ II ತೀವ್ರ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆಯು ಸೆ.19ಕ್ಕೆ ನಡೆಯಲಿದ್ದು, ಯಾರ್ಯಾರಿಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

96 ನೇ ವಯಸ್ಸಿನಲ್ಲಿ ನಿಧನರಾದ ರಾಣಿ ಎಲಿಜಬೆತ್ II ಅವರಿಗೆ ಬ್ರಿಟನ್ ವಿದಾಯ ಹೇಳುತ್ತಿದೆ. ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ರಾಣಿ ಎಲಿಜಬೆತ್ II ರ ರಾಜ್ಯ ಅಂತ್ಯಕ್ರಿಯೆ ನೆರವೇರಲಿದೆ.

ಅಂತ್ಯಕ್ರಿಯೆಯಲ್ಲಿ ಹಲವು ರಾಷ್ಟ್ರಗಳ ರಾಜಕೀಯ ನಾಯಕರು, ರಾಜಮನೆತನಗಳ ಸದಸ್ಯರು ಭಾಗಿಯಾಗುತ್ತಿದ್ದಾರೆ. ಆದರೆ ಇನ್ನಷ್ಟೇ ಅತಿಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಬೇಕಿದೆ. ಆದರೆ ಆಹ್ವಾನ ಪಡೆಯದ ಕೆಲವು ರಾಷ್ಟ್ರಗಳ ಪಟ್ಟಿಯನ್ನು ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿದೆ.

ರಷ್ಯಾ, ಬೆಲಾರಸ್, ಅಫ್ಘಾನಿಸ್ತಾನ, ಮ್ಯಾನ್ಮಾರ್, ಸಿರಿಯಾ, ವೆನೆಜುವೆಲಾ ಗಳು ಆಹ್ವಾನ ಪಡೆದಿಲ. ಆನ್ ಲೈನ್ ಪಬ್ಲಿಕೇಶನ್ ಪ್ರಕಾರ, ಚಾರ್ಲ್ಸ್-III ರಾಜನಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷರು ಶುಭಕೋರಿದ್ದರು, ಆದರೂ ರಷ್ಯಾಗೆ ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಆಹ್ವಾನ ಹೋಗಿಲ್ಲ.

ಉತ್ತರ ಕೊರಿಯಾ, ಇರಾನ್, ನಿಕರಾಗುವಾ ಗಳಿಗೆ ಆಹ್ವಾನ ಹೋಗಿದೆಯಾದರೂ, ದೇಶದ ಮುಖ್ಯಸ್ಥರಿಗೆ ಅಲ್ಲದೇ ರಾಯಭಾರಿ ಪ್ರತಿನಿಧಿಗಳಿಗಷ್ಟೇ ಆಹ್ವಾನವನ್ನು ಕಳಿಸಿಕೊಡಲಾಗಿದೆ.

ಸೋಮವಾರ ಎರಡು ನಿಮಿಷಗಳ ಮೌನಾಚರಣೆ ನಡೆಯಲಿದೆ. ರಾಣಿ ಸೆಪ್ಟೆಂಬರ್ 9 ರಂದು ಕೊನೆಯುಸಿರೆಳೆದರು ಮತ್ತು ಅಂದಿನಿಂದಲೂ ರಾಜಮನೆತನದ ಜನರು ಮತ್ತು UK ಯ ಜನರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಅಂತ್ಯಕ್ರಿಯೆಗಾಗಿ, ದೇಶಗಳ ರಾಜಕೀಯ ಮುಖ್ಯಸ್ಥರಿಂದ ಹಿಡಿದು ವಿಭಿನ್ನ ರಾಜಮನೆತನದ ಸದಸ್ಯರು ಮತ್ತು ಜಗತ್ತಿನಾದ್ಯಂತದ ಗಣ್ಯರು ಸೇರಿದಂತೆ ಅನೇಕ ಅತಿಥಿಗಳು ಯುಕೆಗೆ ತೆರಳುತ್ತಿದ್ದಾರೆ.

ಅಂತರರಾಷ್ಟ್ರೀಯ ನಾಯಕರಲ್ಲಿ ಐರಿಶ್ ಟಾವೊಸೆಚ್ ಮೈಕೆಲ್ ಮಾರ್ಟಿನ್, ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್, ಇಟಾಲಿಯನ್ ಅಧ್ಯಕ್ಷ ಸೆರ್ಗಿಯೋ ಮ್ಯಾಟ್ರೆಲ್ಲಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ಹಾಜರಿರಲಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ರಾಣಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಧಿಕೃತ ಅತಿಥಿ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲವಾದರೂ, ನ್ಯೂಯಾರ್ಕ್ ಪೋಸ್ಟ್ ಈ ಕೆಲವು ಹೆಸರುಗಳನ್ನು ಹಂಚಿಕೊಂಡಿದೆ.

ಶತಮಾನದ ಅತಿ ದೊಡ್ಡ ರಾಜತಾಂತ್ರಿಕ ಕ್ಷಣಗಳಲ್ಲಿ ರಾಜಮನೆತನದ ಸದಸ್ಯರೊಂದಿಗೆ ದೀರ್ಘಕಾಲ ಆಳ್ವಿಕೆ ನಡೆಸಿದ ರಾಜನಿಗೆ ಅಂತಿಮ ನಮನ ಸಲ್ಲಿಸಲು ಪ್ರಪಂಚದಾದ್ಯಂತ ಸುಮಾರು 500 ಗಣ್ಯರು ಲಂಡನ್‌ಗೆ ಹೊರಡಲು ಸಿದ್ಧರಾಗಿದ್ದಾರೆ.

ರಾಯಲ್ ಫ್ಯಾಮಿಲಿ ರಾಣಿಯ ನಾಲ್ವರು ಮಕ್ಕಳು, ಪತ್ನಿಯರು, ಮೊಮ್ಮಕ್ಕಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಾವ್ಯಾವ ದೇಶಗಳು ಪಾಲ್ಗೊಳ್ಳುತ್ತಿಲ್ಲ ರಷ್ಯಾ ಬೆಲರಸ್ ಅಫ್ಘಾನಿಸ್ತಾನ ಮಯನ್ಮಾರ್ ಸಿರಿಯಾ ವೆನೆಜುಲಾ

ಪಾಲ್ಗೊಳ್ಳಲಿರುವವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಭೇಟಿ ನೀಡಲಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರನ್, ಜರ್ಮನ್ ಅಧ್ಯಕ್ಷ ಫ್ರ್ಯಾಂಕ್ ವಾಲ್ಟರ್, ಇಟಾಲಿಯನ್ ಪ್ರೆಸಿಡೆಂಟ್ ಸೆರ್ಗಿಯೋ, ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ, ಆಸ್ಟ್ರೇಲಿಯಾ ಗವರ್ನರ್ ಜನರಲ್ ಡೇವಿಡ್ ಹರ್ಲೆ, ಬ್ರೆಜಿಲ್ ಅಧ್ಯಕ್ಷ ಜೈರ್ ಪಾಲ್ಗೊಳ್ಳಲಿದ್ದಾರೆ.

ವಿವಿಧ ದೇಶಗಳ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:51 pm, Fri, 16 September 22