AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shehbaz Sharif: ಪಾಕಿಸ್ತಾನದ ಪ್ರಧಾನಿಗೆ ಇಯರ್​ಫೋನ್ ಹಾಕೋಕೆ ಬರ್ತಿಲ್ವಂತೆ ಸ್ವಲ್ಪ ಸಹಾಯ ಮಾಡ್ತೀರಾ!

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಮುಂದೆ ಆಗಾಗ ಅವಮಾನ ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.

Shehbaz Sharif: ಪಾಕಿಸ್ತಾನದ ಪ್ರಧಾನಿಗೆ ಇಯರ್​ಫೋನ್ ಹಾಕೋಕೆ ಬರ್ತಿಲ್ವಂತೆ ಸ್ವಲ್ಪ ಸಹಾಯ ಮಾಡ್ತೀರಾ!
ShehbazImage Credit source: The News International
Follow us
TV9 Web
| Updated By: ನಯನಾ ರಾಜೀವ್

Updated on:Sep 16, 2022 | 11:35 AM

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಮುಂದೆ ಆಗಾಗ ಅವಮಾನ ಎದುರಿಸುತ್ತಿರುವ ಪಾಕಿಸ್ತಾನ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಇಯರ್‌ಫೋನ್ ಹಾಕಲು ಸಾಧ್ಯವಾಗದ ಕಾರಣಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರ ಮುಂದೆ ತೊಂದರೆ ಎದುರಿಸಬೇಕಾಯಿತು.

ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ನಲ್ಲಿ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರ ನಡವಳಿಕೆ ವ್ಲಾಡಿಮಿರ್ ಪುಟಿನ್ ಅವರನ್ನು ನಗುವಂತೆ ಮಾಡಿತು, ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇಷ್ಟೇ ಅಲ್ಲ ಪಾಕ್ ಪ್ರಧಾನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ವಾಸ್ತವವಾಗಿ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ರಷ್ಯಾದ ಅಧ್ಯಕ್ಷರೊಂದಿಗಿನ ಭೇಟಿಯ ಸಮಯದಲ್ಲಿ ಇಯರ್‌ಫೋನ್‌ಗಳನ್ನು ಹಾಕಲು ಸಾಧ್ಯವಾಗದ ವೀಡಿಯೊ ವೈರಲ್ ಆಗಿತ್ತು, ಬಳಿಕ ಟ್ರೋಲ್ ಆಗಿತ್ತು.

ಇದು ರಷ್ಯಾದ ವ್ಲಾಡಿಮಿರ್ ಪುಟಿನ್ ಅವರ ಮುಂದೆ ಭಾಷಾಂತರ ಉಪಕರಣಕ್ಕಾಗಿ ಇಯರ್‌ಫೋನ್‌ಗಳನ್ನು ಹಾಕಲು ಪಾಕ್ ಪಿಎಂ ಷರೀಫ್ ಹೇಗೆ ಹೆಣಗಾಡುತ್ತಿದ್ದಾರೆ ಎಂಬುದನ್ನು ತೋರಿಸಿದೆ.

ಇಯರ್​ಫೋನ್​ ಹಾಕಿಕೊಳ್ಳಲು ಸಾಧ್ಯವಾಗದಿದ್ದಾಗ ವೇದಿಕೆಗೂ ಮನವಿ ಮಾಡುತ್ತಾರೆ. ಯಾರಾದರೂ ಬನ್ನಿ ಸಹಾಯ ಮಾಡಿ ಎಂದು. ವ್ಲಾಡಿಮಿರ್ ಪುಟಿನ್ ರಷ್ಯನ್ ಭಾಷೆಯಲ್ಲಿ ತಮ್ಮ ಭಾಷಣವನ್ನು ಪ್ರಾರಂಭಿಸಿದಾಗ, ಪಾಕಿಸ್ತಾನದ ಪ್ರಧಾನಿ ಅವರ ತಮ್ಮ ಭಾಷಾಂತರ ಸಾಧನವು ಕಾರ್ಯನಿರ್ವಹಿಸದ ಕಾರಣ ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

ಇದಾದ ನಂತರ, ಉಪಕರಣವನ್ನು ಸರಿಪಡಿಸಲು ಮತ್ತು ಅದನ್ನು ಕಿವಿಗೆ ಹಾಕಲು ಪ್ರಯತ್ನಿಸುತ್ತಾರೆ, ಮತ್ತು ಇಯರ್ಫೋನ್ ಕೂಡ ಅವರ ಕಿವಿಯಿಂದ ಬೀಳುತ್ತದೆ. ಈ ದೃಶ್ಯವನ್ನು ನೋಡಿದ ಪುಟಿನ್ ಅವರಿಗೂ ನಗು ತಡೆಯಲಾಗಲಿಲ್ಲ.

ಪಾಕ್ ಪ್ರಧಾನಿ ಷರೀಫ್ ಅವರು ಇಯರ್‌ಫೋನ್ ಅಳವಡಿಸುವ ಪ್ರಯತ್ನದಲ್ಲಿ ವಿಫಲರಾದಾಗ ಅವರು ಇಂಗ್ಲಿಷ್‌ನಲ್ಲಿ ಹೇಳುತ್ತಾರೆ – ಯಾರಾದರೂ ನನಗೆ ಸಹಾಯ ಮಾಡಬಹುದು. ಇದಾದ ಬಳಿಕ ಸಭೆಯ ಸಭಾಂಗಣದಲ್ಲಿದ್ದ ಅಧಿಕಾರಿಗಳು ತಮ್ಮ ಟ್ರಾನ್ಸ್‌ಲೇಟರ್ ಟೂಲ್ ಇರುವ ಇಯರ್‌ಫೋನ್‌ಗಳನ್ನು ಸರಿಯಾಗಿ ಕಿವಿಗೆ ಹಾಕಿದರು.

ಆದರೆ, ಪುಟಿನ್ ಮಾತು ಆರಂಭಿಸಿದ ಕೂಡಲೇ ಮತ್ತೊಮ್ಮೆ ಷರೀಫ್ ಅವರ ಇಯರ್ ಫೋನ್ ಕೆಳಗೆ ಬಿದ್ದು ಪುಟಿನ್ ಮತ್ತೆ ನಗುತ್ತಾರೆ. ಈ ಮೂಲಕ ಪುಟಿನ್ ಮುಂದೆ ಪಾಕ್ ಪ್ರಧಾನಿ ಪದೇ ಪದೇ ಮುಖಭಂಗ ಅನುಭವಿಸಬೇಕಾಗಿದೆ. ಆದರೆ, ಎರಡನೇ ಬಾರಿ ಮತ್ತೆ ಅಧಿಕಾರಿಗಳು ಬಂದು ಇಯರ್‌ಫೋನ್‌ ಸರಿಪಡಿಸಿಕೊಳ್ಳುತ್ತಾರೆ.

ಆದಾಗ್ಯೂ, ಈ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಇಮ್ರಾನ್ ಖಾನ್ ಅವರ ಕಾರ್ಯಕರ್ತರು ಅವರನ್ನು ಟ್ರೋಲ್ ಮಾಡಿದ್ದಾರೆ.

ವಿವಿಧ ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Fri, 16 September 22

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ