ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು ಪ್ರಸ್ತಾಪ: ಡಿಕೆ ಸುರೇಶ್ ಹೇಳಿದ್ದೇನು ನೋಡಿ

|

Updated on: Dec 28, 2024 | 1:05 PM

ಚಿನ್ನ ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಬಗ್ಗೆ ಕೊನೆಗೂ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿ ಜತೆ ಅವರಿಗೆ ನಂಟಿದ್ದಿದ್ದು ನಿಜವೇ? ವಂಚನೆ ಬಗ್ಗೆ ಅವರು ಹೇಳಿದ್ದೇನು? ಅವರ ಮುಂದಿನ ನಡೆ ಏನಿರಲಿದೆ? ಈ ಎಲ್ಲ ಮಾಹಿತಿ ಇಲ್ಲಿರುವ ವಿಡಿಯೋದಲ್ಲಿದೆ ನೋಡಿ.

ಬೆಂಗಳೂರು, ಡಿಸೆಂಬರ್ 28: ಶ್ವೇತಾಗೌಡ ಎಂಬಾಕೆ ತಮ್ಮ ಹೆಸರು ಬಳಸಿಕೊಂಡು ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಎಸಗಿದ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ‘ಟಿವಿ9’ ಜತೆ ಮಾತನಾಡಿದ ಅವರು, ‘ನನ್ನ ಹೆಸರು ದುರುಪಯೋಗಪಡಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳನ್ನು ನೋಡಿದ್ದೇನೆ. ಆ ಬಗ್ಗೆ ಪೊಲೀಸರ ಬಳಿ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಸದ್ಯದಲ್ಲೇ ಎರಡು-ಮೂರು ದಿನದಲ್ಲಿ ಪೊಲೀಸ್ ಕಮಿಷನರ್​​ಗೂ ಕೂಡ ದೂರು ನೀಡುತ್ತೇನೆ. ಯಾರೇ ಈ ರೀತಿ ಮಾಡಿದ್ದರೂ ಆ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಯಾರಿಗೆ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಕೊಡಿಸಿ ಎಂದು ಪತ್ರ ಬರೆಯುತ್ತೇನೆ’ ಎಂದರು.

ಒಂದೆರಡು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನ ಮಾಡಿದ್ದರು, ಅವುಗಳಿಗೆ ಹೋಗಿದ್ದೆ ಅಷ್ಟೆ ಬಿಟ್ಟರೆ, ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ನನಗಿರೋದು ಒಬ್ಬಳೇ ತಂಗಿ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 28, 2024 01:05 PM