ಪ್ರೇಮಿಗಳ ದಿನದಂದು ನಂದಿಗಿರಿಧಾಮದ ಕುಳಿರ್ಗಾಳಿಯಲ್ಲಿ ಪ್ರೇಮಿಗಳ ಪ್ರೇಮ ನಿವೇದನೆ, ಪಿಸುಮಾತು ಮತ್ತು ಬಿಸಿಯಪ್ಪುಗೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2022 | 6:17 PM

ಪ್ರತಿವರ್ಷದಂತೆ ಈ ಬಾರಿಯೂ ಪ್ರೇಮಿಗಳ ಅಸಂಖ್ಯಾತ ಜೋಡಿಗಳು ನಂದಿಬೆಟ್ಟದ ಮೇಲೆ ಪ್ರೇಮಗೀತೆಗಳನ್ನು ಹಾಡುತ್ತಾ ಘೇರಾಯಿಸಿದ್ದರು. ಒಂದರ್ಥದಲ್ಲಿ ಪ್ರೇಮಲೋಕ ಅಲ್ಲಿ ಸೃಷ್ಟಿಯಾಗಿತ್ತು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಹಾಗೆ ನೋಡಿದರೆ ನಂದಿಬೆಟ್ಟದ ಮೇಲೆ ಪ್ರತಿದಿನ ಪ್ರಣಯಕ್ಕೆ ಪೂರಕವಾದ, ಅರಸಿಕನೂ ರಸಿಕನಾಗಿ ಬಿಡುವ ವಾತಾವಾರಣವಿರುತ್ತದೆ.

ಪ್ರೇಮಿಗಳ ದಿನಾಚರಣೆ ಮುಗಿದಿದೆ (Valentine’s Day) ಮಾರಾಯ್ರೇ. ಆದರೆ ಪ್ರೀತಿಯಲ್ಲಿರುವವರಿಗೆ, ಪ್ರೇಮಿಗಳಿಗೆ, ಹೊಸ ದಂಪತಿಗಳಿಗೆ ಮತ್ತು ದಂಪತಿಗಳಾಗಿ (couple) ದಶಕಗಳಾದರೂ ಸಂಗಾತಿಯೊಂದಿಗಿನ ಪ್ರೀತಿಯನ್ನು (love) ಸದಾ ನವೀಕರಿಸಿಕೊಳ್ಳುವವರಿಗೆ ಪ್ರತಿ ದಿನವೂ ವ್ಯಾಲೆಂಟೈನ್ಸ್ ಡೇ! ಆದರೂ ಪ್ರೇಮಿಗಳಿಗೆ ಫೆಬ್ರುವರಿ 14 ಒಂದು ರೋಮಾಂಚಕಾರಿ ದಿನ. ಪ್ರೀತಿಯಲ್ಲಿರುವವರು ತಮ್ಮ ಪ್ರೀತಿಯನ್ನು ಮತ್ತೊಮ್ಮೆ ದೃಢೀಕರಿಸಲು ಮತ್ತು ಪ್ರೇಮದ ನಿವೇದನೆ ಮಾಡಿಕೊಳ್ಳ ಬಯಸುವವವರು ಈ ದಿನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಾರೆ. ವಿಶ್ವದ ನಾನಾ ದೇಶಗಳಲ್ಲಿ ಮುಪ್ಪಿನ ಪ್ರಾಯದ ದಂಪತಿಗಳು ಸೇರಿದಂತೆ ಹದಿ ಹರೆಯದ ಯುವಕ-ಯುವತಿಯರು ಪ್ರೇಮಿಗಳ ದಿನವನ್ನು ರಸಮಯವಾಗಿ ಆಚರಿಸುತ್ತಾರೆ. ಬೆಂಗಳೂರು ಸುತ್ತಮುತ್ತ ವಾಸವಾಗಿರುವ ಜನರು ಲಾಲ್ಬಾಗ್, ಕಬ್ಬನ್ ಪಾರ್ಕ್ ಅಥವಾ ಬೇರೆ ಪಾರ್ಕು, ಹೋಟೆಲ್, ಮಾಲ್ ಮತ್ತು ಸಿನಿಮಾ ಥೇಟರ್ಗಳಲ್ಲಿ ಆಚರಿಸುತ್ತಾರಾದರೂ ಹೆಚ್ಚಿನ ಪ್ರೇಮಿಗಳಿಗೆ ಇಷ್ಟವಾಗುವ ತಾಣವೆಂದರೆ, ನಂದಿಬೆಟ್ಟ.

ಪ್ರತಿವರ್ಷದಂತೆ ಈ ಬಾರಿಯೂ ಪ್ರೇಮಿಗಳ ಅಸಂಖ್ಯಾತ ಜೋಡಿಗಳು ನಂದಿಬೆಟ್ಟದ ಮೇಲೆ ಪ್ರೇಮಗೀತೆಗಳನ್ನು ಹಾಡುತ್ತಾ ಘೇರಾಯಿಸಿದ್ದರು. ಒಂದರ್ಥದಲ್ಲಿ ಪ್ರೇಮಲೋಕ ಅಲ್ಲಿ ಸೃಷ್ಟಿಯಾಗಿತ್ತು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಹಾಗೆ ನೋಡಿದರೆ ನಂದಿಬೆಟ್ಟದ ಮೇಲೆ ಪ್ರತಿದಿನ ಪ್ರಣಯಕ್ಕೆ ಪೂರಕವಾದ, ಅರಸಿಕನೂ ರಸಿಕನಾಗಿ ಬಿಡುವ ವಾತಾವಾರಣವಿರುತ್ತದೆ.

ನಂದಿಬೆಟ್ಟಕ್ಕೆ ಬೆಳಗಿನ ಹೊತ್ತೇ ಹೋಗಬೇಕು ಮಾರಾಯ್ರೇ. ಬೆಟ್ಟದ ಮೇಲೆ ದಟ್ಟವಾಗಿ ಸುರಿಯುವ ಮಂಜು, ತಲೆಮೇಲೆ ಹಾದು ಹೋಗುವಂತೆ ಗೋಚರಿಸುವ ಮೋಡಗಳು, ಮೈಮನಸ್ಸನ್ನು ಉಲ್ಲಾಸಗೊಳಿಸಿ ಸಂಗಾತಿಯ ಸೊಂಟವನ್ನು ಬಳಸಿ ಹಿಡಿಯುವಂತೆ, ಬಿಗಿದಪ್ಪುವಂತೆ ಪ್ರೇರೇಪಿಸುವ ಕುಳಿರ್ಗಾಳಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಸನ್ನಿವೇಶ ಸೃಷ್ಟಿಸುತ್ತವೆ.

ಸೋಮವಾರದಂದು ಬೆಟ್ಟದ ಮೇಲೆ ಪ್ರೇಮಿಗಳಲ್ಲದೆ, ನವವಿವಾಹಿತರು, ಮಕ್ಕಳನ್ನು ಹೆತ್ತ ದಂಪತಿಗಳು ಸಹ ನೆರೆದಿದ್ದರು. ಆಗಲೇ ಹೇಳಿದಂತೆ ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಪ್ರೀತಿಸುವ ಮನಸ್ಸುಗಳಿಗೆ ವಯಸ್ಸಾಗುವುದಿಲ್ಲ ಮಾರಾಯ್ರೇ!

ಇದನ್ನೂ ಓದಿ:   ಮದುವೆಯ ನಂತರ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿರುವ ಬಿ-ಟೌನ್​ನ ಐದು ಜೋಡಿಗಳು; ಇಲ್ಲಿವೆ ಫೋಟೋಗಳು

Follow us on