‘ದ್ವಿತ್ವ’ ಸಿನಿಮಾದಲ್ಲಿ ಪುನೀತ್ ಬದಲು ಬೇರೆಯವರು ನಟಿಸ್ತಾರಾ? ತಂಡದಿಂದ ಸಿಕ್ತು ಉತ್ತರ
ಪುನೀತ್ ರಾಜ್ಕುಮಾರ್ ‘ದ್ವಿತ್ವ’ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಸಿನಿಮಾಗೆ ‘ಲೂಸಿಯಾ’ ಪವನ್ ಆ್ಯಕ್ಷನ್ ಕಟ್ ಹೇಳಬೇಕಿತ್ತು. ಈ ಮೊದಲು ರಿಲೀಸ್ ಆಗಿದ್ದ ಚಿತ್ರದ ಪೋಸ್ಟರ್ ಸಾಕಷ್ಟು ಹೈಪ್ ಸೃಷ್ಟಿ ಮಾಡಿತ್ತು.
ಪುನೀತ್ ರಾಜ್ಕುಮಾರ್ (Puneeth Rajkumar) ‘ದ್ವಿತ್ವ’ ಸಿನಿಮಾದಲ್ಲಿ (Dvitwa Movie) ನಟಿಸಬೇಕಿತ್ತು. ಈ ಸಿನಿಮಾಗೆ ‘ಲೂಸಿಯಾ’ ಪವನ್ ಆ್ಯಕ್ಷನ್ ಕಟ್ ಹೇಳಬೇಕಿತ್ತು. ಈ ಮೊದಲು ರಿಲೀಸ್ ಆಗಿದ್ದ ಚಿತ್ರದ ಪೋಸ್ಟರ್ ಸಾಕಷ್ಟು ಹೈಪ್ ಸೃಷ್ಟಿ ಮಾಡಿತ್ತು. ಈ ಚಿತ್ರದ ಕೆಲಸಗಳು ಆರಂಭವಾಗುವ ಮೊದಲೇ ಪುನೀತ್ ನಿಧನ ಹೊಂದಿದ್ದರು. ಇದು ಎಲ್ಲರಿಗೂ ಸಾಕಷ್ಟು ದುಃಖ ತಂದಿದೆ. ‘ದ್ವಿತ್ವ’ ಸಿನಿಮಾದಲ್ಲಿ ಬೇರೆ ಯಾರಾದರೂ ನಟಿಸುತ್ತಾರಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇದಕ್ಕೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಉತ್ತರ ನೀಡಿದ್ದಾರೆ. ‘ಅದರ ಬಗ್ಗೆ ನಾವು ಇನ್ನೂ ಯೋಚನೆ ಮಾಡಿಲ್ಲ. ಈ ಸಬ್ಜೆಕ್ಟ್ ಇಟ್ಟುಕೊಂಡು ಬೇರೆಯಾರಿಗಾದರೂ ಮಾಡಬೇಕು ಎಂಬುದು ತಲೆಗೆ ಬರುತ್ತಿಲ್ಲ. ನಾವು ಶೂನ್ಯ ಸ್ಥಿತಿಯಲ್ಲಿದ್ದೇವೆ. ಸದ್ಯಕ್ಕಂತೂ ಆ ರೀತಿ ಆಲೋಚನೆ ಇಲ್ಲ’ ಎಂದಿದ್ದಾರೆ ಪೂರ್ಣಚಂದ್ರ ತೇಜಸ್ವಿ.
ಇದನ್ನೂ ಓದಿ: ‘ಪುನೀತ್ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್ ಪ್ರಭಾಕರ್ ಗರಂ
ಪುನೀತ್ ಅಭಿನಯದ ‘ಜೇಮ್ಸ್’ ಟೀಸರ್ ನೋಡಿ ವಿಶೇಷ ಸಾಲುಗಳನ್ನು ಬರೆದುಕೊಂಡ ನಟ ಪ್ರಭಾಸ್
Published on: Feb 15, 2022 07:27 PM
ಇಂದು ಆಷಾಢ ಮಾಸದ ಆಡಿ ಶುಕ್ರವಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

