ಬೆಂಗಳೂರು: ಬಾಗಲೂರು ಅಪಘಾತದಲ್ಲಿ ಮಡಿದ ನಂದಿನಿ ಏರೋನಾಟಿಕಲ್ ಇಂಜಿನೀಯರ್, ದುಃಖ ತಡೆಯಲಾಗದ ತಂದೆ

Updated on: Jun 27, 2025 | 5:31 PM

ಕಾರು ಗುದ್ದಿದ ರಭಸಕ್ಕೆ ನಂದಿನಿ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ಚಿಕ್ಕಜಾಲ ಪೊಲೀಸರು ಎಫ್​ಐಅರ್​ನಲ್ಲಿ ಅಪಘಾತ ಮಾಡಿದ ಹೆಂಗಸಿನ ಹೆಸರಾಗಲೀ, ಅಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ದಾಖಲಿಸದೆ ಕೇವಲ ಮಹಿಳಾ ಚಾಲಕಿ ಅಂತ ಬರೆದಿದ್ದಾರಂತೆ. ನಂದಿನಿಯನ್ನು ಉಳಿಸಿಕೊಳ್ಳಲು ಆಕೆ ಕೆಲಸ ಮಾಡುತ್ತಿದ್ದ ಕಂಪನಿಯ ಸಹೋದ್ಯೋಗಿಗಳು ಸಾಕಷ್ಟು ಪರದಾಡಿದ್ದಾರೆ, ಆದರೆ ವಿಧಿಬರಹ ಬೇರೆಯಾಗಿತ್ತು.

ಬೆಂಗಳೂರು, ಜೂನ್ 27: ಕೆಲವರ ಬದುಕಿನಲ್ಲಿ ವಿಧಿ ಏನೆಲ್ಲ ಆಟಗಳನ್ನಾಡುತ್ತದೆ ಅಂತ ನೋಡಿ. ಇವರ ಮಗಳು ನಂದಿನಿ ನಿನ್ನೆ ಸಾಯಂಕಾಲ ಕೆಲಸ ಮುಗಿಸಿಕೊಂಡು ಬಾಗಲೂರಿನಲ್ಲಿರುವ ತನ್ನ ಪಿಜಿಗೆ ಹೋಗುವಾಗ ನಡೆದ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. 24 ವರ್ಷದವರಾಗಿದ್ದ ನಂದಿನಿ [Nandini (24)] ಖಾಸಗಿ ಕಂಪನಿಯೊಂದರಲ್ಲಿ ಏರೋನಾಟಿಕಲ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದರೆಂದು ತಂದೆ ಹೇಳುತ್ತಾರೆ. ತಮಗಿರುವ ಎರಡು ಹೆಣ್ಣುಮಕ್ಕಳನ್ನು ಅವರು ಗಂಡು ಮಕ್ಕಳೆಂದೇ ಸಲುಹಿ ಬೆಳಸಿದ್ದಾರೆ, ದೊಡ್ಡವಳು ನಂದಿನಿ ಬಿಟೆಕ್ ಎಎಂಈ ಮಾಡಿಕೊಂಡು ಕೆಲಸಕ್ಕೆ ಸೇರಿದ್ದರೆ ಚಿಕ್ಕವಳು ಇನ್ನೂ ಓದುತ್ತಿದ್ದಾಳೆ. ಬಾಗಲೂರು ಕೆಐಎಡಿಬಿ ಜಂಕ್ಷನ್​ನಲ್ಲಿ ನಂದಿನಿ ದ್ವಿಚಕ್ರವಾಹನಕ್ಕೆ ಗುದ್ದಿ ಸುಮಾರು ದೂರದವರೆಗೆ ಎಳೆದೊಯ್ದ ಕಾರಿನ ಚಾಲಕಿ ಮದ್ಯದ ಅಮಲಿನಲ್ಲಿದ್ದಳು ಎಂದು ನಂದಿನಿ ತಂದೆ ಹೇಳುತ್ತಾರೆ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಇಂಡಿಯನ್ ಐಡಲ್ ವಿನ್ನರ್ ಪವನ್​ದೀಪ್​ ರಾಜನ್​ಗೆ ಗಂಭೀರ ಗಾಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ