ವಿಜಯೇಂದ್ರ ಬಾಡಿ ಲಾಂಗ್ವೇಜ್ನಿಂದ ಬಿಜೆಪಿ ರಾಜ್ಯ ಘಟಕದಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ಊಹಿಸಬಹುದು!
ಸಭೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ವಿಜಯೇಂದ್ರ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ, ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ, ಅದರ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಸಭೆ ಸೇರಿದ್ದೆವು ಎಂದು ಹೇಳುತ್ತಾರೆ. ಬಿಜೆಪಿ ಇಂಥ ಸಭೆಗಳನ್ನು ತನ್ನ ಕಚೇರಿಯಲ್ಲಿ ನಡೆಸುತ್ತದೆ, ಶಾಸಕರ ಮನೆಗಳಲಲ್ಲ.
ಬೆಂಗಳೂರು, ಜೂನ್ 27: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅಸಲೀ ವಿಷಯವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಪಟ್ಟರೂ ಅನಿವಾರ್ಯತೆಯನ್ನು ಮುಂದೂಡಲು, ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಅವರ ಬಾಡಿ ಲ್ಯಾಂಗ್ವೇಜ್ ನಿಂದ ಸಭೆಯಲ್ಲಿ ನಡೆದ ಚರ್ಚೆಯೇನು ಅನ್ನೋದನ್ನು ಊಹಿಸಬಹದು. ಇವತ್ತು ಮಲ್ಲೇಶ್ವರಂ ಶಾಸಕ ಡಾ ಸಿಎನ್ ಆಶ್ವಥ್ ನಾರಾಯಣ ಮನೆಯಲ್ಲಿ ವಿಜಯೇಂದ್ರ ಸೇರಿದಂತೆ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಸಭೆ ಸೇರಿದ್ದರು. ವಿರೋಧ ಪಕ್ಷದ ನಾಯಕ ಅರ್ ಅಶೋಕ ದೆಹಲಿಗೆ ಹೋಗಿದ್ದರು ವಿಜಯೇಂದ್ರ ಕೂಡ ಹೋಗಿದ್ದರು. ಆದರೆ, ಅಶೋಕ ಅನುಪಸ್ಥಿತಿಯಲ್ಲಿ ಈ ಸಭೆ ನಡೆದಿದೆ ಅಂದರೆ ಅದರ ಅರ್ಜೆನ್ಸಿಯನ್ನು ಊಹಿಸಬಹುದು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾಯಿಸಿ: ಜೆಪಿ ನಡ್ಡಾಗೆ ಅರವಿಂದ ಲಿಂಬಾವಳಿ ಮನವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Jun 27, 2025 06:32 PM