Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ! ಚಿನ್ನ, ಬೆಳ್ಳಿ ಜತೆಗೆ ನಾಲ್ಕೈದು ದೇಶಗಳ ಕರೆನ್ಸಿ ಪತ್ತೆ

ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ! ಚಿನ್ನ, ಬೆಳ್ಳಿ ಜತೆಗೆ ನಾಲ್ಕೈದು ದೇಶಗಳ ಕರೆನ್ಸಿ ಪತ್ತೆ

ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Nov 29, 2024 | 8:01 PM

ಮೈಸೂರು ಜಿಲ್ಲೆಯ ನಂಜನಗೂಡಿನ ಪುರಾಣ ಪ್ರಸಿದ್ದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದುಬಂದಿದೆ. ಕೇವಲ ನಗದು ಹಣ ಮಾತ್ರವಲ್ಲದೇ ಚಿನ್ನ, ಬೆಳ್ಳಿ ಹಾಗೂ ವಿವಿಧ ವಿದೇಶಗಳ ಹಣ ಸಹ ದೇವಸ್ಥಾನದ ಹುಂಡಿಗೆ ಬಂದಿದೆ.

ಮೈಸೂರು, (ನವೆಂಬರ್ 29): ಜಿಲ್ಲೆಯ ನಂಜನಗೂಡಿನ ಪುರಾಣ ಪ್ರಸಿದ್ದ ಶ್ರೀಕಂಠೇಶ್ವರಸ್ವಾಮಿ ಮತ್ತೊಮ್ಮೆ ಕೋಟಿ ಒಡೆಯನಾಗಿದ್ದಾನೆ. ದೇವಾಲಯದ 31 ಹುಂಡಿಗಳಲ್ಲಿ 1 ಕೋಟಿ 84 ಲಕ್ಷದ 47 ಸಾವಿರದ 361 ರೂ. ನಗದು, 63 ಗ್ರಾಂ ಚಿನ್ನ, 2.10 ಕೆ.ಜಿ ಬೆಳ್ಳಿ ಹಾಗೂ ವಿದೇಶಿ ಕರೆನ್ಸಿಗಳು ಸಂಗ್ರಹಗೊಂಡಿದೆ. ಇಂದು (ನವೆಂಬರ್ 29) ದೇವಾಲಯದ ದಾಸೋಹ ಭನವನದಲ್ಲಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ನೇತೃತ್ವದಲ್ಲಿ ಏಣಿಕೆ ಕಾರ್ಯ ನಡೆದಿದ್ದು, ಹಣದ, ಬೆಳ್ಳಿ, ಚಿನ್ನದ ಜೊತೆ ಯುರೋಪ್​, ವಿಯೆಟ್ನಾಂ, ಸಿಂಗಾಪುರ, ಫಿಲಿಪ್ಪೈನ್ಸ್ ಕರೆನ್ಸಿ ಸಹ ಹುಂಡಿಯಲ್ಲಿ ಪತ್ತೆಯಾಗಿವೆ. ಇನ್ನು ಏಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.