ಚಹಾಕೂಟದಲ್ಲಿ ಸಂಭವನೀಯ ಸಚಿವರಿಗೆ ಕೆಲ ಮಹತ್ವದ ಸಲಹೆ ನೀಡಿದ ಮೋದಿ, ವಿಡಿಯೋ ನೋಡಿ

|

Updated on: Jun 09, 2024 | 5:04 PM

ನರೇಂದ್ರ ಮೋದಿ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದಕ್ಕೂ ಮುನ್ನ ಮೋದಿ ತಮ್ಮ ನಿವಾಸದಕ್ಕಿ ಎನ್​ಡಿಎ ಮೈತ್ರಿಕೂಟ ನಾಯಕರಿಗೆ ಚಹಾಕೂಟ ಆಯೋಜಿಸಿದ್ದು, ಈ ವೇಳೆ ನಾಯಕರೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಅಲ್ಲದೇ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ನವದೆಹಲಿ (ಜೂನ್ 09):  ತ್ರಿವಿಕ್ರಮನಂತೆ ಮೂರನೇ ಬಾರಿಗೆ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಎನ್​ಡಿಎ ಮಿತ್ರರೊಂದಿಗೆ ಮತ್ತೊಮ್ಮೆ ದೇಶ ಆಳಲಿರುವ ಮೋದಿ ಸರ್ವಾನುಮತದಿಂದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಇಂದು (ಜೂನ್ 09) ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಪ್ರಮುಖರು ಸೇರಿದಂತೆ ತಮ್ಮ ಜೊತೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಂಭವನೀಯ ಸಚಿವಿಗೆ ಚಹಾಕೂಟ ಏರ್ಪಡಿಸಿದ್ದು, ಈ ವೇಳೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹೌದು.. ಮೋದಿ ತಮ್ಮ ನಿವಾಸದಲ್ಲಿ ಸಂಭವನೀಯ ಸಚಿವರಿಗೆ ಆಯೋಜಿಸಿದ್ದ ಚಹಾಕೂಟದಲ್ಲಿ ಕೆಲ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. 100 ದಿನಗಳ ಕಾರ್ಯಸೂಚಿಯ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಬಾಕಿ ಇರುವ ಯೋಜನೆಗಳು, ನಿಮಗೆ ಯಾವುದೇ ಇಲಾಖೆ ಸಿಕ್ಕರೂ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಐದು ವರ್ಷಗಳ ರೋಡ್ ಮ್ಯಾಪ್ ಕೂಡ ತಯಾರಿಸಬೇಕು. 2047 ರಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ಜನರು ಎನ್‌ಡಿಎಯನ್ನು ನಂಬಿದ್ದಾರೆ ಅದನ್ನು ಬಲಪಡಿಸುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

PM Modi Swearing-in Ceremony Live: ನರೇಂದ್ರ ಮೋದಿಗೆ 3ನೇ ಬಾರಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ

Published On - 2:07 pm, Sun, 9 June 24

Follow us on