ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್ ಹೇಳಿದ್ದೇನು?

ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್ ಹೇಳಿದ್ದೇನು?

Mangala RR
| Updated By: ರಾಜೇಶ್ ದುಗ್ಗುಮನೆ

Updated on:Jul 03, 2024 | 9:26 AM

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು ನರಸಿಂಹರಾಜು. ಈಗ ಅವರ ಮೊಮ್ಮಗ ಅವಿನಾಶ್ ದಿವಾಕರ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣದ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ಅವರು ಹೀರೋ ಪಾತ್ರ ಮಾಡುತ್ತಿದ್ದಾರೆ.

ನರಸಿಂಹರಾಜು ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಈಗ ಅವರ ಮೊಮ್ಮಗ ಅವಿನಾಶ್ ದಿವಾಕರ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರುತಿ ನಾಯ್ಡು ನಿರ್ಮಾಣದ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ಅವರು ಹೀರೋ ಪಾತ್ರ ಮಾಡುತ್ತಿದ್ದಾರೆ. ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದಕ್ಕೆ ಕಾರಣವನ್ನು ಅವರು ನೀಡಿದ್ದಾರೆ. ‘ನಾವು ಕಂಡ ಕನಸು ಇಲ್ಲಿಂದನೇ ಯಶಸ್ಸು ಕಾಣಬಹುದು. ಹೀರೋಗಳು ಮಾಡದೇ ಇರುವಷ್ಟು ದುಡ್ಡನ್ನು ಈಗ ಇನ್​ಫ್ಲ್ಯುಯೆನ್ಸರ್​ಗಳು ಮಾಡುತ್ತಿದ್ದಾರೆ. ಅದೇ ರೀತಿ ಕಿರುತೆರೆಗೂ ಸಖತ್ ಬೇಡಿಕೆ ಇದೆ. ಶ್ರುತಿ ನಾಯ್ಡು ಅವರು ಕಥೆ ಹೇಳಿದಾಗ ನೋ ಎನ್ನಲು ಕಾರಣಗಳೇ ಇರಲಿಲ್ಲ. ಶ್ರುತಿ ನಾಯ್ಡು ಅವರು ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಎಂದರು’ ಎಂಬುದು ಅವಿನಾಶ್ ದಿವಾಕರ್ ಮಾತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 03, 2024 08:11 AM