ವ್ಹೀಲ್​ಚೇರ್​ನಲ್ಲಿದ್ದ ಮಹಿಳೆ ಕಂಡು ಕಾರಿನಿಂದ ಕೆಳಗಿಳಿದು ಬಂದು ಮಾತನಾಡಿಸಿದ ಪ್ರಧಾನಿ ಮೋದಿ

|

Updated on: Oct 28, 2024 | 1:52 PM

Narendra Modi special gesture during road show: ವಡೋದರಾದಲ್ಲಿ ಅಕ್ಟೋಬರ್ 28, ಸೋಮವಾರ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ರೋಡ್​ಶೋ ನಡೆಸಿದರು. ಈ ವೇಳೆ ರಸ್ತೆಯ ಬದಿಯಲ್ಲಿ ವ್ಹೀಲ್​ಚೇರ್​ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡು ಮೋದಿ ಅವರು ಕಾರಿನಿಂದ ಕೆಳಗಿಳಿದು ಹೋಗಿ ಮಾತನಾಡಿಸಿದ ಘಟನೆ ನಡೆಯಿತು.

ವಡೋದರಾ, ಅಕ್ಟೋಬರ್ 28: ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ಅವರ ಜೊತೆ ನರೇಂದ್ರ ಮೋದಿ ಇಂದು ಸೋಮವಾರ ರೋಡ್​ಶೋ ನಡೆಸಿದರು. ವಡೋದರಾ ಏರ್​ಪೋರ್ಟ್​ನಿಂದ ಆರಂಭವಾದ ರೋಡ್ ಶೋ ಟಾಟಾ ಏರ್​ಕ್ರಾಫ್ಟ್ ಕಾಂಪ್ಲೆಕ್ಸ್ ಸ್ಥಳದವರೆಗೆ ಎರಡೂವರೆ ಕಿಮೀ ದೂರ ಸಾಗಿತು. ಮಾರ್ಗದುದ್ದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಜನರು ಪ್ರಧಾನಿಗೆ ಶುಭ ಹಾರೈಸಿದರು. ಈ ವೇಳೆ ಒಂದೆಡೆ ವ್ಹೀಲ್​ಚೇರ್​ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡ ಪ್ರಧಾನಿ ಮೋದಿ, ತಮ್ಮ ಮೆರವಣಿಗೆ ವಾಹನದಿಂದ ಕೆಳಗಿಳಿದು ಹೋಗಿ ಆ ಮಹಿಳೆಯನ್ನು ಮಾತನಾಡಿಸಿದ ಘಟನೆ ನಡೆಯಿತು. ಸ್ಪೇನ್ ಪ್ರಧಾನಿಗಳೂ ಕೆಳಗಿಳಿದು ಬಂದು ಮಹಿಳೆಯನ್ನು ಮಾತನಾಡಿಸಿದರು. ಈ ವೇಳೆ ಆ ಮಹಿಳೆ ಭಾವುಕರಾಗಿದ್ದು ಕಂಡು ಬಂದಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ