‘ದಿ ಎಲಿಫೆಂಟ್ ವಿಸ್ಪರರ್ಸ್’ ಖ್ಯಾತಿಯ ಮಾವುತರಾದ ಬೊಮ್ಮನ್-ಬೆಳ್ಳಿ ಜತೆ ಆನೆ ಶಿಬಿರ ವೀಕ್ಷಿಸಿದ ಮೋದಿ
Theppakadu Elephant Camp: ಅನಾಥವಾಗಿ ಸಿಕ್ಕ ಆನೆ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಾಕುತ್ತಾರೆ. ಇಂದು (ಏಪ್ರಿಲ್ 9) ಅವರನ್ನು ಮೋದಿ ಭೇಟಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಖ್ಯಾತಿಯ ಮಾವುತರಾದ ಬೊಮ್ಮನ್-ಬೆಳ್ಳಿ (Bomman and Bellie) ದಂಪತಿಯ ಜೊತೆ ಸೇರಿ ಅವರು ಆನೆಗಳಿಗೆ ಆಹಾರ ತಿನಿಸಿದ್ದಾರೆ. ಅನಾಥವಾಗಿ ಸಿಕ್ಕ ಆನೆ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ಸಾಕುತ್ತಾರೆ. ಅವರ ಜೀವನದ ಕಥೆಯನ್ನು ಸಾರುವ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಈ ವರ್ಷ ಆಸ್ಕರ್ ಪ್ರಶಸ್ತಿ ಸಿಕ್ಕಿತು. ಆ ಬಳಿಕ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಫೇಮಸ್ ಆಗಿದ್ದಾರೆ. ಅವರ ಜೊತೆ ನರೇಂದ್ರ ಮೋದಿ (Narendra Modi) ಕಾಲ ಕಳೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.