ಅಂತ ಸಿನಿಮಾವನ್ನು ನಾವು ತೆಲುಗಿನಲ್ಲಿ ಮಾಡಿದೆವು, ನನ್ನ ಸಿನಿಮಾ ಕನ್ನಡದಲ್ಲಿಯೂ ರೀಮೇಕ್ ಆಗಿದೆ: ನರೇಶ್

Naresh-Pavitra: ತಮ್ಮ ಮತ್ತೆ ಮದುವೆ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ತೆಲುಗು ನಟ ನರೇಶ್, ತಮ್ಮ ನಿರ್ಮಾಣ ಸಂಸ್ಥೆಯಿಂದ ಅಂಬರೀಶ್​ರ ಅಂತ ಸಿನಿಮಾವನ್ನು ತೆಲುಗಿನಲ್ಲಿ ರೀಮೇಕ್ ಮಾಡಿದ್ದನ್ನು ನೆನಪು ಮಾಡಿಕೊಂಡರು.

ಕಳೆದ ವರ್ಷ ವಿವಾದದ ಕಾರಣಕ್ಕೆ ಕರ್ನಾಟಕದಲ್ಲಿ ಸುದ್ದಿಯಾಗಿದ್ದ ತೆಲುಗು ನಟ ನರೇಶ್ (Naresh) ತಮ್ಮ ನಿರ್ಮಾಣದ ಹೊಸ ಸಿನಿಮಾ ಮತ್ತೆ ಮದುವೆ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನರೇಶ್ ಸಂಬಂಧದ ವಿಷಯ ಕಳೆದ ವರ್ಷ ಬಹಳ ಸುದ್ದಿಯಾಗಿತ್ತು. ಅದೇ ವಿಷಯವನ್ನು ಆಧರಿಸಿ ಮತ್ತೆ ಮದುವೆ ಹೆಸರಿನ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಂದಿದ್ದ ವೇಳೆ ತಮ್ಮ ನಿರ್ಮಾಣ ಸಂಸ್ಥೆ ಅಂಬರೀಶ್ ಅವರ ಅಂತ ಸಿನಿಮಾವನ್ನು ತೆಲುಗಿನಲ್ಲಿ ಮಾಡಿದ್ದು ನೆನಪು ಮಾಡಿಕೊಂಡರು. ತಮ್ಮ ಸಿನಿಮಾ ಒಂದು ಬೊಂಬಾಟ್ ಹೆಂಡ್ತಿ ಹೆಸರಲ್ಲಿ ಕನ್ನಡದಲ್ಲಿ ರೀಮೇಕ್ ಆಗಿದ್ದನ್ನು ನೆನಪು ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us