ವೈಯಕ್ತಿಕ ಜೀವನ ಸುದ್ದಿಯಾಗಿದ್ದು ಬೇಸರವಾಗಿದೆ, ನನ್ನನ್ನು ಬಳಸಿ ನರೇಶ್ ತೇಜೋವಧೆಗೆ ಯತ್ನಿಸಲಾಯಿತು: ಪವಿತ್ರಾ ಲೋಕೇಶ್
Naresh-Pavitra Lokesh: ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ವಿಷಯ ಕಳೆದ ವರ್ಷಾಂತ್ಯದಲ್ಲಿ ಬಹಳ ಸುದ್ದಿಯಾಗಿತ್ತು. ಇದೀಗ ಇದೇ ಜೋಡಿ ನಟಿಸಿರುವ ಮತ್ತೆ ಮದುವೆ ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವಿತ್ರಾ, ಖಾಸಗಿ ಜೀವನ ಸುದ್ದಿಗೆ ಆಹಾರವಾಗಿದ್ದು ಬೇಸರ ತರಿಸಿತ್ತು ಎಂದಿದ್ದಾರೆ.
ನಟಿ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನರೇಶ್ ಅವರ ಸಂಬಂಧದ ಬಗ್ಗೆ ಕಳೆದ ವರ್ಷಾಂತ್ಯದಲ್ಲಿ ಸುದ್ದಿಯಾಗಿತ್ತು. ನರೇಶ್ರ (Naresh) ಮೂರನೇ ಪತ್ನಿ ರಮ್ಯಾ ರಘುಪತಿ (Ramya Raghupathi), ನರೇಶ್ ಹಾಗೂ ಪವಿತ್ರಾರದ್ದು ಅಕ್ರಮ ಸಂಬಂಧವೆಂದು, ಪವಿತ್ರಾರಿಂದ ತಮ್ಮ ಬದುಕು ಹಾಳಾಯಿತೆಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಪವಿತ್ರಾ ಹಾಗೂ ನರೇಶ್ ಇದ್ದ ಹೋಟೆಲ್ಗೆ ಮಾಧ್ಯಮಗಳೊಟ್ಟಿಗೆ ತೆರಳಿ ಜಗಳ ಮಾಡಿದ್ದರು. ಇದೀಗ ಅದೇ ಘಟನೆಗಳನ್ನು ಆಧರಿಸಿ ನರೇಶ್ ಸಿನಿಮಾ ನಿರ್ಮಿಸಿದ್ದು ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ನಟಿಸಿದ್ದಾರೆ ಸಿನಿಮಾಕ್ಕೆ ಮತ್ತೆ ಮದುವೆ ಎಂದು ಹೆಸರಿಡಲಾಗಿದೆ. ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪವಿತ್ರಾ, ವೈಯಕ್ತಿಕ ಜೀವನ ಸುದ್ದಿಯಾಗಿದ್ದು ಬೇಸರವಾಗಿದೆ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್ಬಾಸ್ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್ಮಿಸ್

