ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ ನಡುವಿನ ಸಂಬಂಧದ ಬಗ್ಗೆ ನರೇಶ್ ಅವರ 3ನೇ ಪತ್ನಿ ರಮ್ಯಾ ರಘುಪತಿ ಅವರು ಬಹಿರಂಗವಾಗಿ ಮಾತನಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ನ ಒಂದೇ ರೂಮಿನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಉಳಿದುಕೊಂಡಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ರಮ್ಯಾ ರಘುಪತಿ (Ramya Raghupathi) ಅವರು ಗಲಾಟೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಂಡನ ವ್ಯಕ್ತಿತ್ವ ಎಂಥದ್ದು ಎಂದು ವಿವರಿಸಿದ್ದಾರೆ. ‘ಕಳೆದ 10 ವರ್ಷದಿಂದಲೂ ಇದೇ ಕರ್ಮ ನಮಗೆ. ಪ್ರತಿ ಬಾರಿ ಪರಸ್ತ್ರೀಯರ ಜೊತೆ ನರೇಶ್ (Naresh) ಸಿಕ್ಕಿಕೊಂಡಾಗ ಒಂದು ತಿಂಗಳು ಮಾತ್ರ ಸರಿ ಇರ್ತಾನೆ. ಮತ್ತೆ ಅದನ್ನೇ ಮಾಡುತ್ತಾನೆ’ ಎಂದು ರಮ್ಯಾ ರಘುಪತಿ ಅವರು ಹೇಳಿದ್ದಾರೆ.
ಇದನ್ನೂ ಓದಿ: Pavitra Lokesh: ಮುಖಾಮುಖಿ ಬೈಯ್ದುಕೊಂಡ ರಮ್ಯಾ-ಪವಿತ್ರಾ ಲೋಕೇಶ್; ಖುಷಿಯಿಂದ ಕೇಕೆ ಹಾಕಿದ ನರೇಶ್
ಒಂದೇ ರೂಮ್ನಲ್ಲಿ ನಟಿ ಪವಿತ್ರಾ ಲೋಕೇಶ್, ನಟ ನರೇಶ್: ರೂಂ ಮುಂದೆ ರಮ್ಯ ರಘುಪತಿ ಹೈಡ್ರಾಮಾ