ಒಂದೇ ರೂಮ್​ನಲ್ಲಿ ನಟಿ ಪವಿತ್ರಾ ಲೋಕೇಶ್, ನಟ ನರೇಶ್: ರೂಂ ಮುಂದೆ ರಮ್ಯ ರಘುಪತಿ ಹೈಡ್ರಾಮಾ

ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ. ಈ ವಿಚಾರದಲ್ಲಿ ನಾನು ಪವಿತ್ರ ಲೋಕೇಶ್​ರನ್ನು ನಾನು ದೂರುವುದಿಲ್ಲ. ನರೇಶ್​ ನನ್ನನ್ನು ಮದುವೆಯಾಗಿದ್ದೇ ರಾಜಕೀಯ ಉದ್ದೇಶಕ್ಕಾಗಿ ಎಂದು ಮೈಸೂರಿನಲ್ಲಿ ರಮ್ಯಾ ರಘುಪತಿ ಹೇಳಿಕೆ ನೀಡಿದ್ದಾರೆ.

ಒಂದೇ ರೂಮ್​ನಲ್ಲಿ ನಟಿ ಪವಿತ್ರಾ ಲೋಕೇಶ್, ನಟ ನರೇಶ್: ರೂಂ ಮುಂದೆ ರಮ್ಯ ರಘುಪತಿ ಹೈಡ್ರಾಮಾ
ನಟಿ ಪವಿತ್ರಾ ಲೋಕೇಶ್, ನಟ ನರೇಶ್​, ನರೇಶ್ ಪತ್ನಿ ರಮ್ಯ ರಘುಪತಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jul 03, 2022 | 10:55 AM

ಮೈಸೂರು: ಸ್ಯಾಂಡಲ್​ವುಡ್​ (Sandalwood) ಮತ್ತು ಟಾಲಿವುಡ್​ನಲ್ಲಿ (Tollywood) ಸದ್ಯ ಪವಿತ್ರಾ ಲೋಕೇಶ್​ ಹಾಗೂ ನಟ ನರೇಶ್​ ಸುದ್ದಿ ಸದ್ದು ಮಾಡುತ್ತಿದೆ. ಅವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ದಿನಕ್ಕೊಂದು ಹೊಸ ಸಂಗತಿ ಹೊರ ಬರುತ್ತಿದೆ. ಸದ್ಯ ಮೈಸೂರು ಹುಣಸೂರು ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ನಟ ನರೇಶ್​-ಪ್ರವಿತಾ ತಂಗಿದ್ದ ವಿಚಾರ ತಿಳಿದು ರೂಂ ಮುಂದೆ ನರೇಶ್ ಪತ್ನಿ ರಮ್ಯ ರಘುಪತಿ ಹೈಡ್ರಾಮಮೆ ಸೃಷ್ಟಿ ಮಾಡಿದ್ದಾರೆ. ಬಾಗಿಲು ಬಡಿಯುತ್ತಿದ್ದರೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೊರ ಬಂದಿಲ್ಲ. ಹೋಟೆಲ್ ರೂಂ ಮುಂದೆಯೇ ಕುಳಿತು ರಮ್ಯ ರಘುಪತಿ ಹೈಡ್ರಾಮಾ ಮಾಡಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೊರಟಿದ್ದು, ಈ ವೇಳೆ ಚಪ್ಪಲಿ ಎತ್ತಿಕೊಂಡ ರಮ್ಯಾ ಹೊಡೆಯಲು ಮುಂದಾದರು. ರಮ್ಯಾರನ್ನು ಪೊಲೀಸರು ಹಾಗೂ ಆಪ್ತ ರಕ್ಷಕರು ತಡೆದರು. ಇದೇ ವೇಳೆ ಪವಿತ್ರಾ ಲೋಕೇಶ್ ವಿರುದ್ದ ರಮ್ಯಾ ವಾಗ್ದಾಳಿ ಮಾಡಿದ್ದು, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಟೆಲ್‌ನಿಂದ ಹೊರ ಹೋದರು.

ಇದನ್ನೂ ಓದಿ: ಮರವಂತೆ ಸಮುದ್ರಕ್ಕೆ ಉರುಳಿದ ಕಾರು! ಸಮುದ್ರ ಪಾಲಾದ ವ್ಯಕ್ತಿಗಾಗಿ ಹುಡುಕಾಟ

ಈ ವಿಚಾರದಲ್ಲಿ ನಾನು ಪವಿತ್ರಾ ಲೋಕೇಶ್​ರನ್ನು ದೂರುವುದಿಲ್ಲ

ಟಿವಿ9ಗೆ ನಟ ನರೇಶ್ ಪತ್ನಿ ರಮ್ಯಾ ರಘುಪತಿ ಹೇಳಿಕೆ ನೀಡಿದ್ದು, ನನ್ನ ಪತಿ ನರೇಶ್ ನನಗೆ ಮೋಸ ಮಾಡಿದ್ದಾರೆ. ಈ ವಿಚಾರದಲ್ಲಿ ನಾನು ಪವಿತ್ರ ಲೋಕೇಶ್​ರನ್ನು ನಾನು ದೂರುವುದಿಲ್ಲ. ನರೇಶ್​ ನನ್ನನ್ನು ಮದುವೆಯಾಗಿದ್ದೇ ರಾಜಕೀಯ ಉದ್ದೇಶಕ್ಕಾಗಿ. ಮದುವೆಯಾಗಿ ಎರಡು ವರ್ಷ‌ ಮಾತ್ರ ನರೇಶ್ ಅನ್ಯೋನ್ಯವಾಗಿದ್ದರು. ಆ ಬಳಿಕ ನನಗೆ ತೊಂದರೆ ಕೊಡುತ್ತಲೇ ಬಂದಿದ್ದಾರೆ. ಆದರೂ ನಾನು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ನನ್ನ ಮಗನಿಗೋಸ್ಕರ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಆದರೀಗ ನನಗೆ ಡೈವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ಕೊಡುವುದಿಲ್ಲ. ನಾನು ಒಳ್ಳೆಯ ಮನೆತನಕ್ಕೆ ಸೇರಿದವಳು. ನನ್ನ ಉಸಿರು ಇರುವವರೆಗೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ರಮ್ಯಾ ರಘುಪತಿ ಹೇಳಿಕೆ ನೀಡಿದರು.

ಇದನ್ನೂ ಓದಿ: India Covid Updates: ಭಾರತದಲ್ಲಿ 16,103 ಹೊಸ ಕೊರೊನಾ ಪ್ರಕರಣಗಳು ಪತ್ತೆ, 31 ಮಂದಿ ಸಾವು

Published On - 9:59 am, Sun, 3 July 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್