AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರವಂತೆ ಸಮುದ್ರಕ್ಕೆ ಉರುಳಿದ ಕಾರು! ಸಮುದ್ರ ಪಾಲಾದ ವ್ಯಕ್ತಿಗಾಗಿ ಹುಡುಕಾಟ

ಸಮುದ್ರ ಪಾಲಾದ ಓರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ಆದರೆ ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸದ್ಯ ಈ ಪ್ರಕರಣ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮರವಂತೆ ಸಮುದ್ರಕ್ಕೆ ಉರುಳಿದ ಕಾರು! ಸಮುದ್ರ ಪಾಲಾದ ವ್ಯಕ್ತಿಗಾಗಿ ಹುಡುಕಾಟ
ಸಮುದ್ರಕ್ಕೆ ಉರುಳಿದ್ದ ಕಾರು
TV9 Web
| Edited By: |

Updated on:Jul 03, 2022 | 9:10 AM

Share

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ವ್ಯಾಪ್ತಿಯ ಮರವಂತೆ ಸಮುದ್ರಕ್ಕೆ (Maravanthe Beach) ಕಾರೊಂದು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ 28 ವರ್ಷದ ವೀರಾಜ್ ಆಚಾರ್ಯ ಮೃತಪಟ್ಟಿದ್ದಾರೆ. ಮೃತ ವೀರಾಜ್ ಆಚಾರ್ಯ ಕೋಟೇಶ್ವರ ಗ್ರಾಮದ ನಿವಾಸಿ. ಕಾರು ರಾಷ್ಟ್ರೀಯ ಹೆದ್ದಾರಿ 66ರಿಂದ (National Highway) ಸಮುದ್ರ ನುಗ್ಗಿದ್ದು, ಸಮುದ್ರದ ಅಲೆಗಳ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ ಕಾರಿನ ಹಿಂಬದಿ ಸೀಟ್​ನಲ್ಲಿದ್ದ ಇಬ್ಬರನ್ನ ರಕ್ಷಣೆ ಮಾಡಲಾಗಿದೆ.

ಸಮುದ್ರ ಪಾಲಾದ ಓರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ಆದರೆ ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸದ್ಯ ಈ ಪ್ರಕರಣ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Ravindra Jadeja: ಜಡೇಜಾ ಶತಕವನ್ನು ತನ್ನ ಶತಕದಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

ಇದನ್ನೂ ಓದಿ
Image
ಲಕ್ಷ ಲಕ್ಷ ಹಣಕ್ಕಾಗಿ ಮನೆ ಮಾಲೀಕನ ಮಗನ ಕಿಡ್ನ್ಯಾಪ್​​ಗೆ ಯತ್ನ: ಉಂಡ ಮನೆಗೆ ಕನ್ನ ಹಾಕಿದ ಭೂಪ
Image
ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡುವ ಕೊಪ್ಪಳದ ಕಾಮುಕ ಶಿಕ್ಷಕ ಅರೆಸ್ಟ್!
Image
Happiness: ನೀವು ಸದಾ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ
Image
ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು? ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ

ಲಾರಿ, ಬೈಕ್ ನಡುವೆ ಅಪಘಾತ: ತುಮಕೂರು: ಲಾರಿ ಹಾಗೂ ಬೈಕ್ ನಡುವೆ ಅಪಘಾತ ನಡೆದದಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೀಸೆಗೌಡನದೊಡ್ಡಿ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಕುಣಿಗಲ್ ಪಟ್ಟಣದ ಕೆಆರ್​ಎಸ್ ಅಗ್ರಹಾರದ ಟ್ಯಾಂಕರ್ ಮೆಕ್ಯಾನಿಕ್ ಜಬಿಉಲ್ಲಾ (29) ಮೃತ ದುರ್ದೈವಿ. ಬೈಕ್​ನಲ್ಲಿ ಕುಣಿಗಲ್​ನಿಂದ ಮಂಡ್ಯದ ಕಡೆ ಹೋಗುತ್ತಿರುವಾಗ ಮದ್ದೂರು ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಜಬಿಉಲ್ಲಾಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಲಕ್ಷ ಲಕ್ಷ ಹಣಕ್ಕಾಗಿ ಮನೆ ಮಾಲೀಕನ ಮಗನ ಕಿಡ್ನ್ಯಾಪ್​​ಗೆ ಯತ್ನ: ಉಂಡ ಮನೆಗೆ ಕನ್ನ ಹಾಕಿದ ಭೂಪ

Published On - 9:06 am, Sun, 3 July 22