ಲಕ್ಷ ಲಕ್ಷ ಹಣಕ್ಕಾಗಿ ಮನೆ ಮಾಲೀಕನ ಮಗನ ಕಿಡ್ನ್ಯಾಪ್​​ಗೆ ಯತ್ನ: ಉಂಡ ಮನೆಗೆ ಕನ್ನ ಹಾಕಿದ ಭೂಪ

ಹಣ ಪಡೆಯಲು ಸಿನಿಮಾ ರೀತಿ ಪ್ಲಾನ್ ಮಾಡಿದ್ದ ಆರೋಪಿ, ಪೊಲೀಸರ ಬಲೆಗೆ ಬೀಳದಂತೆ ಖತರ್ನಾಕ್ ಪ್ಲಾನ್ ಮಾಡಿದ್ದ. ಸಂಜೆ ವೇಳೆ ಹೆದ್ದಾರಿ ಬದಿಯಲ್ಲಿದ್ದ ಮಂಗಳಮುಖಿಯರ ಬಳಿ‌ ಹೋಗಿ ಖದೀಮ ಪೋನ್ ಮಾಡುತ್ತಿದ್ದ.

ಲಕ್ಷ ಲಕ್ಷ ಹಣಕ್ಕಾಗಿ ಮನೆ ಮಾಲೀಕನ ಮಗನ ಕಿಡ್ನ್ಯಾಪ್​​ಗೆ ಯತ್ನ: ಉಂಡ ಮನೆಗೆ ಕನ್ನ ಹಾಕಿದ ಭೂಪ
ಶಕ್ತಿವೇಲು, ಸುನಿತಾ ಬಂಧಿತ ಆರೋಪಿಗಳು.
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 03, 2022 | 8:38 AM

ದೇವನಹಳ್ಳಿ: ಬಾಲಕನ ಕಿಡ್ನ್ಯಾಪ್​ಗೆ (Kidnapping) ಯತ್ನಿಸಿದ್ದ ಇಬ್ಬರು ಆರೋಪಿಗಳನ್ನ ಆವಲಹಳ್ಳಿ ಪೊಲೀಸರು ಸೆರೆ ಹಿಡಿದಿರುವಂತಹ ಘಟನೆ ಬೆಂಗಳೂರಿನ ಕಿತ್ತಗನೂರಿನ ಹ್ಯಾಪಿ ಲೇಔಟ್​​ನಲ್ಲಿ ನಡೆದಿದೆ. ಕೆ.ಆರ್.ಪುರಂ ಮೂಲದ ಶಕ್ತಿವೇಲು, ಸುನಿತಾ ಬಂಧಿತ ಆರೋಪಿಗಳು. ಉಂಡ ಮನೆಗೆ ಕನ್ನ ಹಾಕಿದ್ದ ಬಂಧಿತ ಆರೋಪಿ ಶಕ್ತಿವೇಲು, ಮನೋಜ್ ಕುಮಾರ್ ಎಂಬುವವರ 6 ವರ್ಷದ ಮಗನ ಕಿಡ್ನ್ಯಾಪ್​ಗೆ ಯತ್ನಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ. ಮಗ ಶಾಲೆಯಿಂದ ಬರುವ ವ್ಯಾನ್ ಅಡ್ಡಗಟ್ಟಿ ಕಿಡ್ನ್ಯಾಪ್​ಗೆ ವಿಫಲ ಯತ್ನ ನಡೆಸಿದ್ದ ಆರೋಪಿಗಳು, ಕಿಡ್ನ್ಯಾಪ್ ಯತ್ನ ವಿಫಲವಾದರು ಪೋನ್ ಮೂಲಕ ಬ್ಲಾಕ್ ಮೇಲ್ ಮಾಡಿದ್ದು, 5 ಲಕ್ಷ ಹಣ ಕೊಡದಿದ್ದರೆ ಮಗನನ್ನ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿದ್ದ 24 ಗಂಟೆಯಲ್ಲೇ ಆವಲಹಳ್ಳಿ ಪೊಲೀಸರು ಆರೋಪಿಯ ಎಡೆಮುರಿಕಟ್ಟಿದ್ದಾರೆ.

6 ವರ್ಷದ ಬಾಲಕನನ್ನ ಕಿಡ್ನ್ಯಾಪ್ ಮಾಡಲು ಸಂಚು

6 ವರ್ಷದ ಬಾಲಕನನ್ನ ಕಿಡ್ನ್ಯಾಪ್ ಮಾಡಲು ಸಂಚು ಮಾಡಿದ್ದ ಬಂದಿತ ಆರೋಪಿಗಳು, ಜೆನ್ ಕಾರ ಒಂದರಲ್ಲಿ ಬಂದು ಶಾಲಾ ವ್ಯಾನ್ ತಡೆದು ಅಪಹರಣಕ್ಕೆ ಯತ್ನಿಸಿದ್ದಾರೆ. ಆದರೆ ಈ ವೇಳೆ ಆರೋಪಿಗಳ ಜೊತೆ ಮಗುವನ್ನ ಕಳಿಸಲು ಡ್ತೈವರ್ ಒಪ್ಪಿಲ್ಲ. ಚಾಲಕನನ್ನ ಪುಸಲಾಯಿಸಿ ಮಗುವನ್ನ ಕರೆದೋಗಲು ಅರ್ದಗಂಟೆಗೂ ಹಚ್ಚು ಕಾಲ ಸರ್ಕಸ್ ಮಾಡಿದ್ದಾರೆ. ಮೊದಲಿಗೆ ಸುನೀತಾಳಿಂದ ಮಗುವನ್ನ ತಾಯಿ ಕರೆದುಕೊಂಡು ಬರುವಂತೆ ಹೇಳಿರೂದಾಗಿ ಹೇಳಿದ್ದಾಳೆ. ಆದರೆ ಈ ವೇಳೆ ಪೋಷಕರನ್ನ ತೋರಿಸುವಂತೆ ಚಾಲಕ ಕೇಳಿದ್ದ. ಹೀಗಾಗಿ ಸ್ವಲ್ಪ ದೂರ ಚಾಲಕನನ್ನ ಮಹಿಳೆ ಕರೆದುಕೊಂಡು ಹೋದರೆ, ಇತ್ತ ಶಕ್ತಿವೇಲು ಅಪಹರಿಸಲು ಮುಂದಾಗಿದ್ದ. ಆದರೆ ಈ ವೇಳೆ ರಸ್ತೆಯಲ್ಲಿ ವಾಹನಗಳು ಬಂದ ಕಾರಣ ಪ್ಲಾನ್ ಪ್ಲಾಪ್ ಆಗಿದೆ. ಅಷ್ಟರಲ್ಲಿ ವ್ಯಾನ್ ಬಳಿ ಬಂದು ಮಗುವನ್ನ ಮನೆಯಲ್ಲಿ ಬಿಡಲು ಚಾಲಕ ಮುಂದಾಗಿದ್ದು, ಹೀಗಾಗಿ ಚಾಲಕನ ಮೇಲೆ ಬಂಧಿತ ಆರೋಪಿ ಶಕ್ತಿವೇಲು ಮತ್ತು ಸುನಿತಾ ಹಲ್ಲೆ ನಡೆಸಿದ್ದಾರೆ.

ಉಂಡ ಮನೆಗೆ ಕನ್ನ ಹಾಕಿದ ಭೂಪ

ಮನೋಜ್ ಕುಮಾರ್ ಮನೆಯಲ್ಲಿ ಶಕ್ತಿವೇಲು ಕೆಲಸಕ್ಕೆ ಸೇರಿದ್ದ. ಮಗನನ್ನ ಶಾಲೆಗೆ ಬಿಟ್ಟು ಬರೋ ಕೆಲಸಕ್ಕೆ ಸೇರಿ 10 ದಿನ ಕೆಲಸ ಮಾಡಿದ್ದ. ನಂತರ ವ್ಯಾನ್ ಬಂದ ಕಾರಣ ಕೆಲಸ ಬಿಟ್ಟಿದ್ದ. ಕೆಲಸ ಬಿಟ್ಟ ನಂತರ ಹಣಕ್ಕಾಗಿ ಮಗುವಿನ ಅಪಹರಣ ಪ್ಲಾನ್ ಮಾಡಿದ್ದು, ಡಿಮ್ಯಾಂಡ್ ಮಾಡಿದರೆ ಹಣ ಸಿಗುವ ಆಸೆಯಲ್ಲಿದ್ದ ಖದೀಮ. ಹೀಗಾಗಿ ಕೃತ್ಯಕ್ಕೆ ತನ್ನ ಸ್ನೇಹಿತೆ ಸುನಿತಾಳನ್ನ ಬಳಸಿಕೊಂಡಿದ್ದ. ಆದರೆ ಏರಿಯಾದಲ್ಲಿ ಸಿಸಿ ಕ್ಯಾಮರಾ ಮತ್ತು ಜನರ ಓಡಾಟ ಹೆಚ್ಚಾಗಿದ್ದ ಕಾರಣ ಪ್ಲಾನ್ ಪ್ಲಾಪ್ ಆಗಿದೆ. ಅಪಹರಣ ಮಾಡಲು ಮಾಡಿದ್ದ ಎಲ್ಲಾ ಏಕ್ಸಕ್ಲೋಸಿವ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಟಿವಿ 9ಗೆ ಲಭ್ಯವಾಗಿದೆ.

ಹಣ ಪಡೆಯಲು ಸಿನಿಮಾ ರೀತಿ ಪ್ಲಾನ್

ಹಣ ಪಡೆಯಲು ಸಿನಿಮಾ ರೀತಿ ಪ್ಲಾನ್ ಮಾಡಿದ್ದ ಆರೋಪಿ, ಪೊಲೀಸರ ಬಲೆಗೆ ಬೀಳದಂತೆ ಖತರ್ನಾಕ್ ಪ್ಲಾನ್ ಮಾಡಿದ್ದ. ಸಂಜೆ ವೇಳೆ ಹೆದ್ದಾರಿ ಬದಿಯಲ್ಲಿದ್ದ ಮಂಗಳಮುಖಿಯರ ಬಳಿ‌ ಹೋಗಿ ಖದೀಮ ಪೋನ್ ಮಾಡುತ್ತಿದ್ದ. ಪೋನ್ ಮಾಡಿ ನಂತರ ಮತ್ತೋಂದು ಲೋಕೆಷನ್​ಗೆ ತೆರಳುತ್ತಿದ್ದ ಆರೋಪಿ, ಹೀಗಾಗಿ ಆವಲಹಳ್ಳಿ ಪೊಲೀಸರು ಸಾಕಷ್ಟು ತಲೆ ಕೆಡಸಿಕೊಂಡಿದ್ದರು. ನಂತರ 5 ಲಕ್ಷದಿಂದ 2 ಲಕ್ಷಕ್ಕೆ ಡೀಲ್ ಮಾಡಿಸಿದ್ದ ಇ‌ನ್ಸಪೇಕ್ಟರ್ ಪ್ರಕಾಶ್ ಅಂಡ್ ಟೀಂ, ಕೊನೆಗೆ ಹಣ ಕೊಡೊದಾಗಿ ಹೇಳಿದ್ದರು. ಒಂದು ಸ್ಥಳದಲ್ಲಿ ಹಣವಿಟ್ಟು ಪೊಟೋ ಕಳಿಸುವಂತೆ ಆರೋಪಿ ಹೇಳಿದ್ದು, ಹೀಗಾಗಿ ಕಾಟಮನಲ್ಲೂರು ಕ್ರಾಸ್ ಬಳಿ ಹಣವಿಟ್ಟು ಮಪ್ತಿಯಲ್ಲಿ ಪೊಲೀಸರು ವಾಚ್ ಮಾಡುತ್ತಿದ್ದರು. ಈ ವೇಳೆ ಹಣ ತೆಗೆದುಕೊಳ್ಳಲು ಬಂದ ವೇಳೆ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ಸೇನೆಯ ಜನರಲ್​ಗಳನ್ನು ರಿಯಲ್ ಎಸ್ಟೇಟ್ ಏಜೆಂಟ್​ಗಳೆಂದ ಪಾಕಿಸ್ತಾನ ಹಿರಿಯ ಪತ್ರಕರ್ತ ಆಮಿರ್ ಮೇಲೆ ಅಪರಿಚಿತರಿಂದ ಹಲ್ಲೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada