Happiness: ನೀವು ಸದಾ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ

ಸಂತೋಷಕ್ಕೆ ಶಾರ್ಟ್​ಕಟ್​ಗಳಿಲ್ಲ, ಆದರೆ ಅದು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಉತ್ತಮ ಅಭ್ಯಾಸ. ನಮ್ಮವರ ಸಂತೋಷದಲ್ಲಿ ನಾವು ಖುಷಿ ಕಂಡುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ನೀವು ನಿಮ್ಮವರನ್ನು ಖುಷಿ ಪಡಿಸಬೇಕೆ? ನೀವು ಸದಾ ಸಂತೋಷವಾಗಿರಬೇಕೇ? ಹಾಗಾದರೆ ಈ ಸಲಹೆಗಳನ್ನು ಪಾಲಿಸಿ.

Happiness: ನೀವು ಸದಾ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ
Happiness
Follow us
TV9 Web
| Updated By: ನಯನಾ ರಾಜೀವ್

Updated on: Jul 03, 2022 | 8:30 AM

ಸಂತೋಷಕ್ಕೆ ಶಾರ್ಟ್​ಕಟ್​ಗಳಿಲ್ಲ, ಆದರೆ ಅದು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಉತ್ತಮ ಅಭ್ಯಾಸ. ನಮ್ಮವರ ಸಂತೋಷದಲ್ಲಿ ನಾವು ಖುಷಿ ಕಂಡುಕೊಳ್ಳುವುದು ಎಲ್ಲರಿಗೂ ಸಾಧ್ಯವಿಲ್ಲ. ನೀವು ನಿಮ್ಮವರನ್ನು ಖುಷಿ ಪಡಿಸಬೇಕೆ? ನೀವು ಸದಾ ಸಂತೋಷವಾಗಿರಬೇಕೇ? ಹಾಗಾದರೆ ಈ ಸಲಹೆಗಳನ್ನು ಪಾಲಿಸಿ.

ನಾವು ಕೆಲವು ಕೆಲಸಗಳನ್ನು ನಾವು ಬಚಾವಾಗಲು, ಇನ್ನೂ ಕೆಲವು ಕೆಲಸಗಳನ್ನು ಬೇರೆಯವರ ಸಂತೋಷಕ್ಕೋಸ್ಕರ ಮಾಡುತ್ತೇವೆ, ನಾವು ನಮ್ಮನ್ನು ಹಾಗೂ ನಮ್ಮ ಸುತ್ತಮುತ್ತಲಿನವರನ್ನು ಒಪ್ಪಿಕೊಳ್ಳುವುದನ್ನು ಮೊದಲು ಕಲಿಯಬೇಕು. ಸದಾ ತಿನ್ನುವುದು, ಟಿವಿ ನೋಡುವುದು, ನಿಮಗೆ ಬೇಡವಾಗಿರುವ ವಸ್ತುಗಳನ್ನು ಖರೀದಿಸುವುದು, ಸೋಮಾರಿತನ ಇದೆಲ್ಲದರಿಂದ ನೀವು ಸಂತೋಷವಾಗಿರಲು ಸಾಧ್ಯವಿಲ್ಲ.

ನೀವು ಸದಾ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ಸದಾ ನಗುನಗುತ್ತಾ ಸಂತೋಷವಾಗಿರುವ ದಾರಿಯನ್ನು ಕಂಡುಕೊಳ್ಳಬೇಕು.

ನಿಮ್ಮನ್ನು ನೀವು ಒಪ್ಪಿಕೊಳ್ಳುವುದು: ಪ್ರತಿ ಕ್ಷಣವನ್ನು ನೀವು ಆನಂದಿಸಬೇಕು, ಇಲ್ಲದ ವಸ್ತುಗಳ ಬಗ್ಗೆ ಕೊರಗುವುದರ ಬದಲು ಇರುವ ವಸ್ತುಗಳಲ್ಲಿ ಖುಷಿಪಡಬೇಕು. ಹಾಗಾದಾಗ ಮಾತ್ರ ನಿಮ್ಮನ್ನು ನೀವು ಒಪ್ಪಿಕೊಂಡಿದ್ದೀರಿ ಎಂದರ್ಥ.

ಪ್ರೀತಿ ಪಾತ್ರರ ಜತೆ ಸಮಯ ಕಳೆಯಿರಿ: ನೀವು ಯಾರನ್ನಾದರೂ ಅವಲಂಬಿಸಿದ್ದರೆ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ, ಕುಟುಂಬ, ಸ್ನೇಹಿತರು, ಸಾಕು ಪ್ರಾಣಿಗಳು ಏನೇ ಇರಲಿ ಅವರ ಬಳಿ ಸಂತೋಷವಾಗಿರಿ.

ಸಣ್ಣ ಸಣ್ಣ ವಿಷಯವನ್ನೂ ಆನಂದಿಸಿ: ಪ್ರತಿ ಸಣ್ಣ ವಿಷಯಗಳನ್ನೂ ಆನಂದಿಸಿ, ಅಂದುಕೊಂಡ ಹಾಗೇ ಎಲ್ಲವೂ ನಡೆಯಬೇಕು ಎಂದು ಕೂರಬೇಡಿ, ಕೈಮೀರಿದ ಘಟನೆಗಳಿಗೂ ಹೊಂದಿಕೊಂಡಾಗ ಬದುಕು ಸುಂದರ ಎನಿಸುವುದು. ಹೀಗಾಗಿ ಸಣ್ಣ ಸಣ್ಣ ಕಿರಿಕಿರಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಅದರ ಬದಲು ಖುಷಿಯ ವಿಚಾರಗಳನ್ನು ಹುಡುಕಿ. ಪ್ರತಿದಿನ ಪ್ರತಿಕ್ಷಣ ನಗಲು ನೂರಾರು ವಿಷಯಗಳಿರುತ್ತವೆ.

ಸಣ್ಣಸಣ್ಣ ವಿಷಯಗಳನ್ನೂ ಅನುಭವಿಸಿ ನಗುವುದನ್ನು ಅಭ್ಯಸಿಸಿಕೊಳ್ಳಿ. ಚಿಕ್ಕವರಿರುವಾಗ ರೂಡಿಸಿಕೊಂಡ ಅನೇಕ ಕೆಲಸಗಳು ನಮಗೆ ಖುಷಿ ನೀಡುತ್ತವೆ. ಅಂತಹ ಕೆಲಸಗಳೆಡೆಗೆ ಗಮನ ನೀಡಿ. ಆಗ ನಿಮ್ಮ ಮನಸ್ಸಿನ ದುಗುಡ, ಅಸಮಧಾನಕ್ಕೆ ಪೂರ್ಣವಿರಾಮ ಇಡಬಹುದು.

ಸಂತೋಷ: ಒಬ್ಬರ ಬಳಿ ನಮ್ಮ ಸಂತೋಷವನ್ನು ಹಂಚಿಕೊಂಡಾಗ ಅದು ದ್ವಿಗುಣವಾಗುತ್ತದೆ. ಆ ದಿನವು ನಿಮ್ಮನ್ನು ಹೆಚ್ಚು ನಗುನಗುತ್ತಿರುವಂತೆ ಮಾಡುತ್ತದೆ.

ಜೀವನದಲ್ಲಿ ಗುರಿ ಇರಲಿ: ಜೀವನದಲ್ಲಿ ಗುರಿ ಎಂಬುದನ್ನು ಇಟ್ಟುಕೊಳ್ಳಿ, ಅದನ್ನು ಸಾಕಾರಗೊಳಿಸಲು ಕಷ್ಟಪಡಿ ಅದನ್ನು ಸಾಧಿಸಿದಾಗ ಸಿಗುವ ಖುಷಿಯೇ ಬೇರೆ, ಅದು ಸದಾ ನಿಮ್ಮ ಮುಖದಲ್ಲಿ ನಗು ಇರುವಂತೆ ಮಾಡುತ್ತದೆ.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ