ಮಂಗಳೂರು: ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ!

ಸುಮಾರು 220 ಮೆಟ್ರಿಕ್ ಟನ್ ತೈಲ ಹೊಂದಿರುವ ವಿದೇಶಿ ಹಡಗಿನಲ್ಲಿ 15 ಸಿಬ್ಬಂದಿ ಇದ್ದರು. ತಕ್ಷಣ ಸಿಬ್ಬಂದಿಗಳನ್ನ ರಕ್ಷಣೆ ಮಾಡಲಾಗಿತ್ತು. ಆದರೆ ಹಡಗಿನ ತೈಲ ಸೋರಿಕೆಯಾದರೆ ಮತ್ಸ್ಯ ಸಂಕುಲ ನಾಶವಾಗುವ ಆತಂಕ ಇದೆ.

ಮಂಗಳೂರು: ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ ತೈಲ ಸೋರಿಕೆ!
ನೀರಿನಲ್ಲಿ ಮುಳುಗಿದ ಹಡಗು
Follow us
TV9 Web
| Updated By: sandhya thejappa

Updated on:Jul 02, 2022 | 12:54 PM

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ವಿದೇಶಿ ಸರಕು ಸಾಗಣೆ ಹಡಗಿನಿಂದ (Ship) ಸಣ್ಣ ಪ್ರಮಾಣದಲ್ಲಿ ತೈಲ (Oil) ಸೋರಿಕೆ ಆಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಮುದ್ರದಲ್ಲಿ ಸಣ್ಣ ಪ್ರಮಾಣದಲ್ಲಿ ಕಪ್ಪು ಬಣ್ಣದ ತೈಲ ಸೋರಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ. ಸಿರಿಯಾ ದೇಶದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಚೀನಾದಿಂದ ಲೆಬನಾನ್ಗೆ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಸುಮಾರು 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದಾಗ ಜೂನ್ 23ರಂದು ತಾಂತ್ರಿಕ ಕಾರಣದಿಂದಾಗಿ ಹಡಗು ಸಮುದ್ರದಲ್ಲಿ ಮುಳುಗಡೆಯಾಗಿತ್ತು.

ಸುಮಾರು 220 ಮೆಟ್ರಿಕ್ ಟನ್ ತೈಲ ಹೊಂದಿರುವ ವಿದೇಶಿ ಹಡಗಿನಲ್ಲಿ 15 ಸಿಬ್ಬಂದಿ ಇದ್ದರು. ತಕ್ಷಣ ಸಿಬ್ಬಂದಿಗಳನ್ನ ರಕ್ಷಣೆ ಮಾಡಲಾಗಿತ್ತು. ಆದರೆ ಹಡಗಿನ ತೈಲ ಸೋರಿಕೆಯಾದರೆ ಮತ್ಸ್ಯ ಸಂಕುಲ ನಾಶವಾಗುವ ಆತಂಕ ಇದೆ.ಮಂಗಳೂರು ಹೊರವಲಯದ ಉಚ್ಚಿಲದ ಬಟ್ಟಪಾಡಿ ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳ ಹಿಂದೆಯೇ ತೈಲ ಸೋರಿಕೆಯಾಗುತ್ತಿರುವ ಮಾಹಿತಿ ಇದೆ.

ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಶಿವಸೇನೆಯ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆ

ಇದನ್ನೂ ಓದಿ
Image
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಆನೆಮರಿಯ ದೇಹವನ್ನು ಎಳೆದೊಯ್ಯುವ ದೃಶ್ಯ ಸೆರೆಸಿಕ್ಕಿದೆ!
Image
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಶಿವಸೇನೆಯ ರಾಜನ್ ಸಾಲ್ವಿ ನಾಮಪತ್ರ ಸಲ್ಲಿಕೆ
Image
ಆಲ್ಟ್​ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ವಿರುದ್ಧ ಹೊಸ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು
Image
Rishabh Pant: ಪಂತ್ ಪವರ್​ಫುಲ್ ಸೆಂಚುರಿಗೆ ಧೋನಿ ದಾಖಲೆ ಉಡೀಸ್

ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಸ್ಥಳೀಯರು, ಕಳೆದ ಮೂರು ದಿನಗಳಿಂದ ತೈಲ ಸೋರಿಕೆಯಾಗಿ ವಾಸನೆ ಬರುತ್ತಿದೆ. ಸಮುದ್ರದಲ್ಲಿ ತೈಲ ಸೇರಿಕೊಂಡು ಬಾವಿ ನೀರು ಸೇರಿ ಜಲ ಮೂಲಗಳು ಕಲುಷಿತವಾಗಿದೆ. ಇದರಿಂದ ಇಲ್ಲಿನ ಕೆಲ ಮನೆಗಳ ನಿವಾಸಿಗಳಿಗೆ ಬೇಧಿಯಾಗುತ್ತಿದೆ. ನಾಲ್ಕೈದು ಜನರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮೀನುಗಾರಿಕೆ ತೆರಳಲಾಗದೇ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದರು.

ಜೂನ್ 26ರಂದು ಮುಳುಗಿರುವ ಶಿಪ್​ನ ಸುತ್ತಾ ಮುತ್ತಾ ಕೋಸ್ಟ್ ಗಾರ್ಡ್ ಮಿನಿ ಜೆಟ್ ಇತ್ತು. ತೈಲ ಸೋರಿಕೆಯಾದರೆ ಮಾಹಿತಿ ನೀಡಲು ಜೆಟ್ ಸುತ್ತು ಹೊಡೆಯುತ್ತಿತ್ತು. ಈ ಹಿನ್ನೆಲೆ ಮುಳುಗಿರುವ ಶಿಪ್ ಬಳಿ ಬೇರೆ ಶಿಪ್, ಮೀನುಗಾರಿಕೆ ಬೋಟ್ ಬರದಂತೆ ಎಚ್ಚರಿಸಲಾಗಿತ್ತು.

ಇದನ್ನೂ ಓದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಆನೆಮರಿಯ ದೇಹವನ್ನು ಎಳೆದೊಯ್ಯುವ ದೃಶ್ಯ ಸೆರೆಸಿಕ್ಕಿದೆ!

Published On - 12:42 pm, Sat, 2 July 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ