AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಆನೆಮರಿಯ ದೇಹವನ್ನು ಎಳೆದೊಯ್ಯುವ ದೃಶ್ಯ ಸೆರೆಸಿಕ್ಕಿದೆ!

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಆನೆಮರಿಯ ದೇಹವನ್ನು ಎಳೆದೊಯ್ಯುವ ದೃಶ್ಯ ಸೆರೆಸಿಕ್ಕಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 02, 2022 | 12:44 PM

Share

ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸಫಾರಿಗೆಂದು ಹೋದವರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಚಿಕ್ಕ ಆನೆಮರಿಯ ದೇಹವನ್ನು ಪೊದೆಗೆ ಎಳೆದೊಯ್ಯುವ ದೃಶ್ಯ ಕಾಣಿಸಿದೆ.

Nagarhole: ಹುಲಿ, ಸಿಂಹ ಮತ್ತು ಚಿರತೆ-ಈ ಹಿಂಸ್ರಪಶುಗಳು (carnivores animals ) ಆನೆ  (elephants) ಅಥವಾ ಅನೆಮರಿಗಳನ್ನು ಬೇಟೆಯಾಡುವ ದೃಶ್ಯ ನಾವು ಯಾವತ್ತೂ ನೋಡಿಲ್ಲ. ಕ್ರೂರಮೃಗಳು ಆನೆಗಳನ್ನು ತಡವಿಕೊಳ್ಳುವ ಗೋಜಿಗೆ ಹೋಗಲಾರವು. ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಸಫಾರಿಗೆಂದು ಹೋದವರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ (Nagarhole National Park) ಹುಲಿಯೊಂದು ಚಿಕ್ಕ ಆನೆಮರಿಯ ದೇಹವನ್ನು ಪೊದೆಗೆ ಎಳೆದೊಯ್ಯುವ ದೃಶ್ಯ ಕಾಣಿಸಿದ್ದು ಅದನ್ನವರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದಾರೆ. ಆನೆಮರಿ ಮೊದಲೇ ಸತ್ತುಬಿದ್ದಿತ್ತೋ ಅಥವಾ ಒಂಟಿಯಾಗಿ ಸಿಕ್ಕ ಮರಿಯ ಮೇಲೆ ಹುಲಿ ಎರಗಿತೋ ಅಂತ ಗೊತ್ತಾಗಿಲ್ಲ. ಆನೆಮರಿಯ ದೇಹವನ್ನು ಹುಲಿ ಎಳೆದೊಯ್ಯಲು ಬಹಳ ಕಷ್ಟಪಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:   Viral Video: ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದ ಸುಂಟರಗಾಳಿಯಂತಹ ರಚನೆಯ ವಿಡಿಯೋ