ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡುವ ಕೊಪ್ಪಳದ ಕಾಮುಕ ಶಿಕ್ಷಕ ಅರೆಸ್ಟ್!

ಸ್ಥಳೀಯರು ಅಜರುದ್ದೀನ್​ಗೆ ಧರ್ಮದೇಟು ನೀಡಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ವಿಡಿಯೋ ವೈರಲ್ ಆದ ಬಳಿಕ ಶಿಕ್ಷಕನನ್ನು ಅಧಿಕಾರಿಗಳು ಅಮಾನತ್ತು ಮಾಡಿದ್ದಾರೆ.

ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡುವ ಕೊಪ್ಪಳದ ಕಾಮುಕ ಶಿಕ್ಷಕ ಅರೆಸ್ಟ್!
ಶಿಕ್ಷಕ ಅಜರುದ್ದೀನ್
TV9kannada Web Team

| Edited By: sandhya thejappa

Jul 03, 2022 | 2:31 PM

ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡುವ ಕಾಮುಕ ಶಿಕ್ಷಕನ (Teacher) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಸ್ಥಳೀಯರು ಧರ್ಮದೇಟು ನೀಡುತ್ತಿದ್ದಂತೆ ಪರಾರಿಯಾಗಿದ್ದ ಶಿಕ್ಷಕ ಸದ್ಯ ಅರೆಸ್ಟ್ ಆಗಿದ್ದಾನೆ. ಕಾರಟಗಿ ಪೊಲೀಸರು ಅಜರುದ್ದೀನ್​ನ ಗೋವಾದಲ್ಲಿ ಸೆರೆ ಹಿಡಿದಿದ್ದಾರೆ. ಅಜರುದ್ದೀನ್ ಸಿಂಧನೂರ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ. ಕಾರಟಗಿ ಪಟ್ಟಣದ ಜೆ.ಪಿ.ನಗರದಲ್ಲಿ ವಾಸವಿದ್ದ. ಮಕ್ಕಳಿಗೆ ಪಾಠದ ನೆಪದಲ್ಲಿ ವಿಚಿತ್ರವಾಗಿ ಕಿರುಕುಳ ನೀಡಿದ್ದು, ಮನೆಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಕಾಮದಾಟವಾಡಿದ್ದಾನೆ. ಮಕ್ಕಳನ್ನ ಮನೆಗೆ ಕರೆಸಿ ವಿದ್ಯಾರ್ಥಿಗಳ ಗುಪ್ತಾಂಗವನ್ನು ಕೋಲಿನಿಂದ ಅಳತೆ ಮಾಡಿ ವಿಡಿಯೋ ಮಾಡಿಕೊಂಡಿದ್ದ. ಅಲ್ಲದೆ ಮಹಿಳೆಯರೊಂದಿಗೆ ರಾಸಲೀಲೆಯ ವಿಡಿಯೋವನ್ನೂ ಇಟ್ಟುಕೊಂಡಿದ್ದ.

ಸ್ಥಳೀಯರು ಅಜರುದ್ದೀನ್​ಗೆ ಧರ್ಮದೇಟು ನೀಡಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ವಿಡಿಯೋ ವೈರಲ್ ಆದ ಬಳಿಕ ಶಿಕ್ಷಕನನ್ನು ಅಧಿಕಾರಿಗಳು ಅಮಾನತ್ತು ಮಾಡಿದ್ದಾರೆ. ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾತನಾಡಿ ನಮ್ಮ ವಿಶೇಷ ತಂಡ ಕಾಮುಕ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Happiness: ನೀವು ಸದಾ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ

ಕಾಮುಕ ಶಿಕ್ಷಕನ ವಿರುದ್ದ ದೂರು: ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡದೆ ಹೋದರೆ ನಿನ್ನ ಸಾಯಿಸುತ್ತೇನೆಂದು ಮಹಿಳೆಯೊಬ್ಬರಿಗೆ ಅಜರುದ್ದೀನ್ ಬೆದರಿಕೆ ಹಾಕಿದ್ದ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಸ್ತೀನಿ ಎಂದು ಜಯಶ್ರೀಯನ್ನು ಪರಿಚಯ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದ. ನೀನು ಸಹಕರಿಸಿದಿದ್ದರೆ ವಿಡಿಯೋ ಅಪ್ಲೋಡ್ ಮಾಡೋದಾಗಿ ಹೆದರಿಸಿದ್ದ. ಈ ಬಗ್ಗೆ ಅಜರುದ್ದೀನ್ ವಿರುದ್ಧ ಮಹಿಳೆ ಕೊಪ್ಪಳ ಜಿಲ್ಲೆ ಕಾರಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಶಿಕ್ಷಕನ ವಿರುದ್ಧ 376, 354, 323, 504, 506 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಕ್ರಿಕೆಟ್ ಟೂರ್ನಮೆಂಟ್​ನಿಂದ ಸಿಕ್ಕಿ ಬಿದ್ದ ಶಿಕ್ಷಕ: ಕ್ರಿಕೆಟ್ ಟೂರ್ನಮೆಂಟ್ ವೇಳೆ ಅಜರುದ್ದೀನ್ ತನ್ನ ಮೊಬೈಲ್ ಮತ್ತೊಬ್ಬರ ಬಳಿ ಕೊಟ್ಟಿದ್ದ. ಅವತ್ತೆ ಮೊಬೈಲ್​​ನಿಂದ ವಿಡಿಯೋ ರಿಲೀಸ್ ಆಗಿದೆ. ಆತನ ಮೊಬೈಲ್​ನಲ್ಲಿದ್ದ ವಿಡಿಯೋ ಮತ್ತೊಂದು ಮೊಬೈಲ್​ಗೆ ವರ್ಗಾವಣೆ ಮಾಡಲಾಗಿದೆ. ಅಜರುದ್ದೀನ್ ಮೂಲತಃ ಧಾರವಾಡ ಜಿಲ್ಲೆಯ ನಿವಾಸಿ. ಈತ ಅಮಾಯಕ ಹೆಣ್ಣು ಮಕ್ಕಳನ್ನೇ ಪರಿಚಯ ಮಾಡಿಕೊಂಡು ಪುಸಲಾಯಿಸುತ್ತಿದ್ದ. ಹೆಣ್ಣು ಮಕ್ಕಳಿಗೆ ಬೇಕಾಗಿರುವ ಲಿಫ್ಟಿಕ್, ಪೌಡರ್ ಕೊಡಿಸುತ್ತಿದ್ದ. ಒಳಉಡುಗಳನ್ನೂ ಖರೀದಿ ಮಾಡುತ್ತಿದ್ದ. ಈ ಎಲ್ಲದರ ಬಗ್ಗೆ ಆರೋಪಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

ಇದನ್ನೂ ಓದಿ: ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು? ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ

ಇದು ಲವ್ ಜಿಹಾದ್ ಎಂದ ಸಂತ್ರಸ್ತೆ: ದೂರು ನೀಡಿರುವ ಸಂತ್ರಸ್ತೆ ಮಹಿಳೆ ಲವ್ ಜಿಹಾದ್ ಬಗ್ಗೆ ಉಲ್ಲೇಖಿಸಿದ್ದಾರೆ. ಮಹಿಳಾ ಪೋಷಕರನ್ನ ಪುಸಲಾಯಿಸಿ, ಆ ಬಳಿಕ ಲೈಂಗಿಕ ಸಂಪರ್ಕ ಮಾಡುತ್ತಿದ್ದ. ನಂತರ ತನ್ನ ಸಮುದಾಯಕ್ಕೆ ಸೇರಿಸಿಕೊಳ್ಳುತ್ತೇನೆಂದು ಮೈಂಡ್ ವಾಷ್ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶಾಲೆಯಲ್ಲೂ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಮಾಡುತ್ತಾನೆ. ಇದರಿಂದ ನೂರಾರು ಜನ ವಿದ್ಯಾರ್ಥಿನಿಯರು ಶಾಲೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕರ ಜೊತೆ ಕಿರಿಕ್: ಕಾರಟಗಿಯಲ್ಲಿ ಕೇಸ್ ದಾಖಲಾದ ಬೆನ್ನಲ್ಲೇ ಅಜರುದ್ದೀನ್ ಸಸ್ಪೆಂಡ್ ಆಗಿದ್ದ. ಆ ಬಳಿಕ ಆತನ ಬೆಂಬಲಿಗರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಶಾಲೆಗೆ ಬೀಗ ಹಾಕಿ ಶಿಕ್ಷಕರು ಹಾಗೂ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾರೆ.

ಇದನ್ನೂ ಓದಿ

ಶಿಕ್ಷಕನ ವಿರುದ್ಧ ಪತ್ನಿ ದೂರು: ಎರಡು ವರ್ಷದ ಹಿಂದೆಯೇ ಶಿಕ್ಷಕನ ಪತ್ನಿ ಬಿಇಓಗೆ ದೂರು ನೀಡಿದ್ದಾರೆ. 2011ರಲ್ಲಿ ಅಜರುದ್ದೀನ್ ಮದುವೆಯಾಗಿತ್ತು. ಮದುವೆಯಾದರೂ, ವಿಧವೆ. ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುತ್ತಿದ್ದ. ಈ ಬಗ್ಗೆ ನಾನೇ ನನ್ನ ಪತಿ ಜೊತೆ ಗಲಾಟೆ ಮಾಡಿದ್ದೆ. ಆತನ ಕೃತ್ಯ ನನ್ನ 8 ವರ್ಷದ ಮಗನ ಮೇಲೆ ಪರಿಣಾಮ ಬೀರಿದೆ. ಶಾಲಾ ಅವಧಿಯಲ್ಲೂ ಆತ ರಜೆ ಮಾಡುತ್ತಿದ್ದ. ಲಾಡ್ಜ್​​ಗೆ ಹೋಗಿ ಮಹಿಳೆಯರ ಜೊತೆ ಕಾಲ ಕಳೆಯುತ್ತಿದ್ದ. ಈ ಮೂಲಕ ಶಿಕ್ಷಣ ಇಲಾಖೆಗೂ ಮೋಸ ಮಾಡಿದ್ದಾನೆ ಎಂದು ಅಜರುದ್ದೀನ್ ಪತ್ನಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada