ಜೋರು ಮಳೆಯ ನಡುವೆಯೂ ನರ್ತನ ಕೋಲ ಸೇವೆ; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
ಮಳೆಯನ್ನೂ ಲೆಕ್ಕಿಸದೆ ದೈವ ನರ್ತಕರು ಬಬ್ಬುಸ್ವಾಮಿ ದೈವದ ಕೋಲ ನಡೆಸಿದ್ದು ದೈವ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೇಮೋತ್ಸವ ಆರಂಭವಾಗುತ್ತಲೇ ಮಳೆ ಜೋರಾಗಿದ್ದು ಮಳೆ ನಡುವೆಯೇ ದೈವ ನರ್ತಕರು ನರ್ತನ ಕೋಲ ಸೇವೆ ಮಾಡಿದ್ದಾರೆ.
ಉಡುಪಿ, ಮೇ.20: ಕರಾವಳಿ ಜಿಲ್ಲೆ ಉಡುಪಿಯಲ್ಲಿ ನಡೆದ ದೈವ ಕೋಲದ ಸೇವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಡುಪಿಯ ಅಲೆವೂರಿನಲ್ಲಿ ಮಳೆ ಸುರಿಯುತ್ತಿದ್ದರೂ ಬಬ್ಬುಸ್ವಾಮಿ ದೈವದ ಕೋಲ ನಡೆದಿದೆ. ನೇಮೋತ್ಸವ ಆರಂಭವಾಗುತ್ತಲೇ ಮಳೆ ಜೋರಾಗಿದ್ದು ಮಳೆ ನಡುವೆಯೇ ದೈವ ನರ್ತಕರು ನರ್ತನ ಕೋಲ ಸೇವೆ ಮಾಡಿದ್ದಾರೆ. ಜೋರಾಗಿ ಮಳೆ ಸುರಿದರೂ ನರ್ತನ ನಿಲ್ಲಿಸಿಲ್ಲ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಳೆ ಬಂದರೂ ದೈವ ನರ್ತಕ ಕೋಲ ಸೇವೆಯನ್ನು ನಿಲ್ಲಿಸದೆ ಮುಂದುವರೆಸಿದ್ದು ಈ ಬಗ್ಗೆ ನೆಟ್ಟಿಗರು ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Published on: May 20, 2024 09:54 AM