ವಿಡಿಯೋ: ಚಂದನ್-ನಿವೇದಿತಾ ವಿಚ್ಛೇದನದ ಬಗ್ಗೆ ಆಪ್ತ ನವರಸ್ ಮಾತು
ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ವಿಡಿಯೋ ಹಾಕುತ್ತಾ ತಮ್ಮದು ರೊಮ್ಯಾಂಟಿಕ್ ಜೋಡಿ ಎಂದು ಬಿಂಬಿಸಿಕೊಂಡಿದ್ದ ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರ ವಿಚ್ಛೇದನದ ಕಾರಣವೇನು ಎಂದು ಅವರ ಆಪ್ತ ನವರಸ್ ವಿವರಿಸಿದ್ದಾರೆ.
ಸ್ಯಾಂಡಲ್ವುಡ್ನ (Sandalwood) ಸೆಲೆಬ್ರಿಟಿ ಜೋಡಿ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಒಟ್ಟಿಗೆ ವಿಡಿಯೋಗಳನ್ನು ಹಾಕುತ್ತಾ ನೋಡುವರ ಕಣ್ಣಿಗೆ ಆದರ್ಶ ದಂಪತಿಯ ಹಾಗೆ ತಮ್ಮನ್ನು ತೋರ್ಪಿಡಿಸಿಕೊಂಡಿದ್ದರು. ಆದರೆ ಈಗ ಏಕಾ ಏಕಿ ವಿಚ್ಛೇದನ ಪಡೆದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಇಬ್ಬರೂ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿರುವುದಾಗಿ ಹೇಳಿದ್ದು, ಯಾವ ಕಾರಣಕ್ಕೆ ಈ ಜೋಡಿ ದೂರಾಗಿದೆ ಎಂಬುದು ಅಭಿಮಾನಿಗಳಿಗೆ ತಿಳಿದಿಲ್ಲ. ಇದೀಗ ಈ ಇಬ್ಬರಿಗೂ ಆಪ್ತವಾಗಿದ್ದ ನವರಸ್ ಚಂದನ್ ಹಾಗೂ ನಿವೇದಿತಾರ ವಿಚ್ಛೇದನದ ಬಗ್ಗೆ ಟಿವಿ9 ಕನ್ನಡದೊಟ್ಟಿಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ