ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ; ಸಿಎಂ ಯೋಗಿ ಆದಿತ್ಯನಾಥ್ ವಿಶ್ವಾಸ
ನವೆಂಬರ್ 11ರಂದು ಬಿಹಾರ ಚುನಾವಣೆಯ ಮುಂದಿನ ಹಂತ ನಡೆಯಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಬಿಹಾರದ ಮೋತಿಹಾರಿಯಲ್ಲಿ ಮೆಗಾ ರ್ಯಾಲಿ ನಡೆಸಿದರು. ಈ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಎನ್‌ಡಿಎ ಸರ್ಕಾರದ ಅಡಿಯಲ್ಲಿ ಬಿಹಾರ ಅಭಿವೃದ್ಧಿಯ ಹಾದಿಯಲ್ಲಿದೆ ಎಂದು ಹೇಳಿದರು.
ಮೋತಿಹಾರಿ, ನವೆಂಬರ್ 8: ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಯೋಗಿ ಆದಿತ್ಯನಾಥ್ (Yogi Adityanath) ಇಂದು ಬಿಹಾರದಲ್ಲಿ ಚುನಾವಣಾ ರ‍್ಯಾಲಿ ನಡೆಸಿದರು. ಈ ವೇಳೆ ಅವರು ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನವೆಂಬರ್ 6ರಂದು ಮೊದಲ ಹಂತದ ಚುನಾವಣೆ ನಡೆದರೆ, ಎರಡನೇ ಹಂತದ ಚುನಾವಣೆ ನವೆಂಬರ್ 11ರಂದು ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ಮೋತಿಹಾರಿ ರ‍್ಯಾಲಿಯಲ್ಲಿ ಸಭೆ ಸೇರಿದವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಆರ್‌ಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರವು ತನ್ನದೇ ಆದ ಅದ್ಭುತ ಇತಿಹಾಸವನ್ನು ಹೊಂದಿದೆ. ಇದು ನಳಂದ ವಿಶ್ವವಿದ್ಯಾಲಯವನ್ನು ನೀಡಿದ ರಾಜ್ಯ. ಆರ್ಯಭಟ ಮತ್ತು ಆಚಾರ್ಯ ಚಾಣಕ್ಯನನ್ನು ನೀಡಿದ ರಾಜ್ಯ. ಗೌತಮ ಬುದ್ಧನಿಗೆ ಜ್ಞಾನೋದಯ ಮಾಡಿದ ರಾಜ್ಯ. 24 ತೀರ್ಥಂಕರರ ಜನ್ಮಸ್ಥಳವಾದ ರಾಜ್ಯ. ಈ ರಾಜ್ಯವು ಸಾಕ್ಷರತೆಯ ವಿಷಯದಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿಯಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಕಾರಣ ಎಂದು ಟೀಕಿಸಿದ್ದಾರೆ.”
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

