ನೀಲಕುರಿಂಜಿ ಹೂವು ಕೇರಳದಲ್ಲಿ 12 ವರ್ಷಗಳಿಗೊಮ್ಮೆ ಮಾತ್ರ ಅರಳುವ ಸುಗಂಧಭರಿತ ನೀಲಿವರ್ಣದ ಪುಷ್ಪ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 03, 2021 | 1:24 AM

ನೀಲಕುರಿಂಜಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲೇ ಅಪರೂಪದ ಹೂವಾಗಿದೆ. ಇದನ್ನು ಯಾಕೆ ಅಪರೂಪದ ಹೂವು ಅನ್ನಲಾಗುತ್ತದೆ ಎಂದರೆ, 12 ವರ್ಷಗಳಲ್ಲಿ ಒಮ್ಮೆ ಮಾತ್ರ ಅದು ಆರಳುತ್ತದೆ.

ಕಿಲೋಮೀಟರ್​ಗಳವರೆಗೆ ತನ್ನ ವಿಶಿಷ್ಟ ಸುವಾಸನೆ ಬೀರಿ ಜನರನ್ನು ಇನ್ನಿಲ್ಲದಂತೆ ಸೆಳಯುವ ನೀಲಕುರಿಂಜಿ ಹೂವಿನ ಬಗ್ಗೆ ನೀವು ಕೇಳಿರಬಹುದೇ ಹೊರತು ನೋಡಿರುವ ಸಾಧ್ಯತೆ ಬಹಳ ವಿರಳ. ಯಾಕೆಂದರೆ ಇದು ಅಪರೂಪಕ್ಕೊಮ್ಮೆ ಅರಳುವ ಹೂವು. ಅದೂ ಅಲ್ಲದೆ ಈ ವಿರಳಾತಿವಿರಳ ಹೂವು ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಮಾತ್ರ ಕಾಣ ಸಿಗುತ್ತದೆ.

ನೀಲಕುರಿಂಜಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲೇ ಅಪರೂಪದ ಹೂವಾಗಿದೆ. ಇದನ್ನು ಯಾಕೆ ಅಪರೂಪದ ಹೂವು ಅನ್ನಲಾಗುತ್ತದೆ ಎಂದರೆ, 12 ವರ್ಷಗಳಲ್ಲಿ ಒಮ್ಮೆ ಮಾತ್ರ ಅದು ಆರಳುತ್ತದೆ. ಕೇರಳದ ಇಡುಕ್ಕಿ ಜಿಲ್ಲೆಯ ಸಂತನಪರ ಪಂಚಾಯತ್ ವ್ಯಾಪ್ತಿಯ ಪಶ್ಚಿಮಘಟ್ಟಗಳಲ್ಲಿ ಮಾತ್ರ ಇದು ಅರಳುತ್ತದೆ. ಈಗ ಅಂದರೆ ಆಗಸ್ಟ್ನಲ್ಲಿ ನೀಲಕುರಿಂಜಿ ಅರಳುವ ಸಮಯ ಎಂದು ಹೇಳಲಾಗುತ್ತದೆ.

ಈ ಹೂವಿನ ವೈಜ್ಞಾನಿಕ ಹೆಸರು ಸ್ಟ್ರೋಬಿಲ್ಯಾಂಥಸ್ ಕುಂತಿಯಾನಾ. ಮಲಯಾಳಂ ಇದು ನೀಲಕುರಿಂಜಿ ಮತ್ತು ತಮಿಳಿನಲ್ಲಿ ಕುರಿಂಜಿ ಎಂದು ಕರೆಯುತ್ತಾರೆ. ಈ ಹೂವು ಬೆಳೆಯುವ 10 ಎಕರೆ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ. ಆದರೆ ಕೊವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಬಾರಿ ಪ್ರವಾಸಿಗಳಿಗೆ ಬೇಟಿ ನೀಡುವ ಅವಕಾಶ ಕಲ್ಪಿಸಲಾಗಿಲ್ಲ.

ಇದನ್ನೂ ಓದಿ: ‘ಮಿಜೋರಾಂ ಪೊಲೀಸರು ಸಮಸ್ಯೆ ಉಲ್ಬಣವಾಗುವಂತೆ ಮಾಡಿದ್ದಾರೆ’: ಗಡಿ ಸಂಘರ್ಷದ ನಡುವೆಯೇ  ವಿಡಿಯೊ ಟ್ವೀಟ್ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ

ಇದನ್ನೂ ಓದಿ:  ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ