AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗಿ 11 ತಿಂಗಳ ಬಳಿಕ ನೀರಜ್ ಚೋಪ್ರಾ ಆರತಕ್ಷತೆ; ಪ್ರಧಾನಿ ಮೋದಿ ಭಾಗಿ

ಮದುವೆಯಾಗಿ 11 ತಿಂಗಳ ಬಳಿಕ ನೀರಜ್ ಚೋಪ್ರಾ ಆರತಕ್ಷತೆ; ಪ್ರಧಾನಿ ಮೋದಿ ಭಾಗಿ

ಪೃಥ್ವಿಶಂಕರ
|

Updated on:Dec 28, 2025 | 4:31 PM

Share

Neeraj Chopra & Himani Mor Reception: ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಹಾಗೂ ಟೆನಿಸ್ ಆಟಗಾರ್ತಿ ಹಿಮಾನಿ ಮೋರ್ ದಂಪತಿಗಳು 2025 ರ ಜನವರಿ 16 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವರ್ಷದ ಕೊನೆಯಲ್ಲಿ ಅವರ ವಿವಾಹ ಆರತಕ್ಷತೆ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಮೋದಿ ಅವರು ಉಡುಗೊರೆ ನೀಡಿ, ದಂಪತಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

2025 ರ ಜನವರಿ 16 ರಂದು ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಹಾಗೂ ಟೆನಿಸ್ ಆಟಗಾರ್ತಿ ಹಿಮಾನಿ ಮೋರ್ ದಂಪತಿಗಳು ವರ್ಷದ ಕೊನೆಯಲ್ಲಿ ವಿವಾಹ ಆರತಕ್ಷತೆ ಮಾಡಿಕೊಂಡಿದ್ದಾರೆ. ಈ ಆರತಕ್ಷತೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿವಾಹ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದು ದಂಪತಿಗಳಿಗೆ ಶುಭಹಾರೈಸಿದ್ದಾರೆ. ಇದೀಗ ಅದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ದಂಪತಿಗಳಿಗೆ ಉಡುಗೊರೆಗಳನ್ನು ನೀಡುತ್ತಿರುವುದು ಮತ್ತು ಅವರೊಂದಿಗೆ ಫೋಟೋಶೂಟ್‌ಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಆ ಬಳಿಕ ದಂಪತಿಗಳನ್ನು ಆಶೀರ್ವದಿಸಿರುವ ಮೋದಿ ಅವರೊಂದಿಗೆ ಕೆಲ ಸಮಯ ಮಾತನಾಡಿ ಅಲ್ಲಿಂದ ತೆರಳಿದ್ದಾರೆ.

Published on: Dec 28, 2025 04:30 PM