ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ, ಪೋಷಕರು ಫುಲ್ ಖುಷ್​

Updated By: ರಮೇಶ್ ಬಿ. ಜವಳಗೇರಾ

Updated on: Jun 15, 2025 | 5:18 PM

ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಶೈಕ್ಷಣಕವಾಗಿ ಹಿಂದುಳಿದ ಜಿಲ್ಲೆಯೆಂಬ ಖ್ಯಾತಿಗೆ ಪಾತ್ರವಾಗಿರೋ ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಹಾಗೂ ರಾಷ್ಟ್ರಮಟ್ಟದಲ್ಲಿ 17 ನೇ ರ್ಯಾಂಕ್ ಬರುವ ಮೂಲಕ ಸಾಧನೆ ಮಾಡಿದ್ದಾರೆ. ನಿಖಲಿ ಸೊನ್ನದ ಸಾಧನೆ ಮಾಡಿರೋ ವಿದ್ಯಾರ್ಥಿ. ವಿಜಯಪುರ ನಗರದ ವೈದ್ಯ ದಂಪತಿಯ ಪುತ್ರ ನಿಖಿಲ್ ನೀಟ್ ನ ಒಟ್ಟು 720 ಅಂಕಗಳಿಗೆ 670 ಅಂಕಗಳನ್ನು ಪಡೆಯೋ ಮೂಲಕ ಸಾಧನೆ ಮಾಡಿದ್ದಾನೆ. ಒಂದರಿಂದ ಐದನೇ ತರಗತಿ ಬಿಎಲ್​ ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ನಂತರ ಆರರಿಂದ ಹತ್ತನೇ ತರಗತಿವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ.

ವಿಜಯಪುರ, (ಜೂನ್ 15): ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ಶೈಕ್ಷಣಕವಾಗಿ ಹಿಂದುಳಿದ ಜಿಲ್ಲೆಯೆಂಬ ಖ್ಯಾತಿಗೆ ಪಾತ್ರವಾಗಿರೋ ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಹಾಗೂ ರಾಷ್ಟ್ರಮಟ್ಟದಲ್ಲಿ 17 ನೇ ರ್ಯಾಂಕ್ ಬರುವ ಮೂಲಕ ಸಾಧನೆ ಮಾಡಿದ್ದಾರೆ. ನಿಖಲಿ ಸೊನ್ನದ ಸಾಧನೆ ಮಾಡಿರೋ ವಿದ್ಯಾರ್ಥಿ. ವಿಜಯಪುರ ನಗರದ ವೈದ್ಯ ದಂಪತಿಯ ಪುತ್ರ ನಿಖಿಲ್ ನೀಟ್ ನ ಒಟ್ಟು 720 ಅಂಕಗಳಿಗೆ 670 ಅಂಕಗಳನ್ನು ಪಡೆಯೋ ಮೂಲಕ ಸಾಧನೆ ಮಾಡಿದ್ದಾನೆ. ಒಂದರಿಂದ ಐದನೇ ತರಗತಿ ಬಿಎಲ್​ ಡಿಇ ಸಂಸ್ಥೆಯ ಬಿ ಎಂ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ನಂತರ ಆರರಿಂದ ಹತ್ತನೇ ತರಗತಿವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ. ಬಳಿಕ ನಿಖಿಲ್ ಪಿಯುಸಿ ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ಈ ಸಾಧನೆ ಬಗ್ಗೆ ನಿಖಿಲ್ ಹಾಗೂ ಪೋಷಕರೊಂದಿಗೆ ನಮ್ಮ ವಿಜಯಪುರ ಜಿಲ್ಲಾ ಪ್ರತಿನಿಧಿ ಅಶೋಕ ಯಡಳ್ಳಿ ನಡೆಸಿರೋ ಮಾತುಕತೆ ಇಲ್ಲಿದೆ ನೋಡಿ.

Published on: Jun 15, 2025 05:18 PM