ದಿಢೀರನೆ ಬೆಳಗಾವಿಗೆ ಹೋಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರನ್ನು ಭೇಟಿಯಾದ ನೇಹಾ ಹಿರೇಮಠ ತಂದೆ-ತಾಯಿ

|

Updated on: May 02, 2024 | 7:08 PM

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 7 ರಂದು ಮತದಾನ ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿಯವರ ಮಗ ಮೃಣಾಲ್ ಹೆಬ್ಬಾಳ್ಕರ್ ಕಣದಲ್ಲಿದ್ದರೆ ಅವರ ಎದುರಾಳಿ ಬಿಜೆಪಿಯ ಜಗದೀಶ್ ಶೆಟ್ಟರ್ ಆಗಿದ್ದಾರೆ. ಕಳೆದ ವಾರ ನಿರಂಜನ ಮತ್ತು ಗೀತಾ ಹಿರೇಮಠ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಲ್ಲದೆ ತಮ್ಮ ಮಗಳ ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದರು.

ಬೆಳಗಾವಿ: ಇಂದು ನಡೆದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮೊನ್ನೆ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಹಾಡುಹಗಲೇ ಕೊಲೆಯಾದ ನೇಹಾ ಹಿರೇಮಠ (Neha Hiremath) ತಂದೆ-ತಾಯಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಗಳ ಭೀಕರ ಕೊಲೆಯ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ನಿರಂಜನ ಹಿರೇಮಠ (Niranjan Hiremath) ಮತ್ತು ಗೀತಾ ಹಿರೇಮಠ (Geeta Hiremath) ಅವರು ಸಚಿವೆಯೊಂದಿಗೆ ಯಾವ ವಿಷಯಗಳನ್ನು ಚರ್ಚಿಸಿದರೆನ್ನುವುದು ಗೊತ್ತಾಗಿಲ್ಲ. ನಗರದ ಕುವೆಂಪು ರಸ್ತೆಯಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಮನೆಯಲ್ಲಿ ದಂಪತಿ ಸಚಿವೆಯೊಂದಿಗೆ ಮಾತಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ 7 ರಂದು ಮತದಾನ ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿಯವರ ಮಗ ಮೃಣಾಲ್ ಹೆಬ್ಬಾಳ್ಕರ್ ಕಣದಲ್ಲಿದ್ದರೆ ಅವರ ಎದುರಾಳಿ ಬಿಜೆಪಿಯ ಜಗದೀಶ್ ಶೆಟ್ಟರ್ ಆಗಿದ್ದಾರೆ. ಕಳೆದ ವಾರ ನಿರಂಜನ ಮತ್ತು ಗೀತಾ ಹಿರೇಮಠ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಲ್ಲದೆ ತಮ್ಮ ಮಗಳ ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನೇಹಾ ಹಿರೇಮಠ ತಂದೆಗೆ ಫೋನಲ್ಲಿ ವೆರಿ ಸಾರಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ