BSY in Yadgir: ಸೋಮಣ್ಣ ಅಥವಾ ಬೇರೆ ಯಾವುದೇ ಸಚಿವ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿಲ್ಲವೆಂದ ಬಿಎಸ್ ಯಡಿಯೂರಪ್ಪ
ಸಚಿವ ವಿ ಸೋಮಣ್ಣ ಕಾಂಗ್ರೆಸ್ ಪಕ್ಷ ಸೇರುವ ವದಂತಿ ಬಗ್ಗೆ ಬಿಎಸ್ವೈ ಗಮನ ಸೆಳೆದಾಗ, ಬಿಜೆಪಿಯ ಯಾವುದೇ ಮಂತ್ರಿ, ಶಾಸಕ ಕಾಂಗ್ರೆಸ್ ಸೇರುತ್ತಿಲ್ಲ, ತಾವು ಬೆಂಗಳೂರಿಗೆ ವಾಪಸ್ಸಾದ ನಂತರ ಸೋಮಣ್ಣ ಜೊತೆ ಮಾತಾಡುವುದಾಗಿ ಅವರು ಹೇಳಿದರು.
ಯಾದಗಿರಿ: ವಿಜಯ ಸಂಕಲ್ಪ ಯಾತ್ರೆ (Vijay Sankalp Yatre) ಭಾಗವಾಗಿ ಯಾದಗಿರಿ ಜಿಲ್ಲೆ ಪ್ರವಾಸದಲ್ಲಿರುವ ಬಿಎಸ್ ಯಡಿಯೂರಪ್ಪನವರು (BS Yediyurappa,) ಇಂದು ನಗರದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮಾತಿಗೆ ಹೆಚ್ಚು ಮಹತ್ವ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ಸಚಿವ ವಿ ಸೋಮಣ್ಣ (V Somanna) ಅವರು ಕಾಂಗ್ರೆಸ್ ಪಕ್ಷ ಸೇರುವ ವದಂತಿ ಬಗ್ಗೆ ಅವರ ಗಮನ ಸೆಳೆದಾಗ, ಬಿಜೆಪಿಯ ಯಾವುದೇ ಮಂತ್ರಿ, ಶಾಸಕ ಕಾಂಗ್ರೆಸ್ ಸೇರುತ್ತಿಲ್ಲ, ತಾವು ಬೆಂಗಳೂರಿಗೆ ವಾಪಸ್ಸಾದ ನಂತರ ಸೋಮಣ್ಣ ಜೊತೆ ಮಾತಾಡುವುದಾಗಿ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 08, 2023 12:09 PM