ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Dec 22, 2024 | 8:58 PM

ಹುಟ್ಟೂರು ಸೇರೋ ತವಕ..ಹೆತ್ತವರನ್ನ ನೋಡಿ ಖುಷಿ ಪಡೋ ಸಂಭ್ರಮ..ತನ್ನ ನೆಲದಲ್ಲಿ ಓಡಾಡೋ ಕನಸು..ಹೀಗಾಗಿ ಐಷಾರಾಮಿ ಕಾರ್‌ ಹತ್ತಿದವರು ಖುಷಿಯಿಂದಲೇ ಪ್ರಯಾಣಿ ಬೆಳೆಸಿದ್ರು. ಆದ್ರೆ ಆ ಖುಷಿ ಹೆಚ್ಚು ಹೊತ್ತು ಇರ್ಲೇ ಇಲ್ಲ. ಇವರಿಗಾಗಿಯೇ ಜವರಾಯ ಕಾಯುತ್ತಿದ್ದ ಎಂಬಂತೆ ನೆಲಮಂಗಲ ಬಳಿ ಕಂಟೇನರ್‌ ರೂಪದಲ್ಲಿ ಬಂದು ಅಪ್ಪಳಿಸಿದ್ದ. ಇನ್ನು ಅಪಘಾತಕ್ಕೂ ಮೊದಲು ಟೋಲ್ ಸಿಸಿಕ್ಯಾಮಾರದಲ್ಲಿ ಚಂದ್ರಮ್‌ ಅವರೇ ಕಾರು ಚಲಾಯಿಸುತ್ತಿರುವ ಕೊನೆ ದೃಶ್ಯ ಸೆರೆಯಾಗಿದೆ.

ಬೆಂಗಳೂರು, (ಡಿಸೆಂಬರ್ 22): ನಿನ್ನೆ ಅಪಘಾತಕ್ಕೆ ಬಲಿ ಆಗಿದ್ದ ಆರು ಜನ್ರ ಶವಗಳು ಇಂದು ಬೆಳಗ್ಗೆ ಹುಟ್ಟೂರು ತಲುಪುತ್ತಿದ್ದಂತೆ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅಷ್ಟಕ್ಕೂ ಉದ್ಯಮಿ ಕೊನೆ ಪಯಣದ ದೃಶ್ಯ ಟೋಲ್‌ನಲ್ಲಿನ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕ್ರಿಸ್‌ಮಸ್‌ ರಜೆ, ಅಪ್ಪನ ಆರೋಗ್ಯ ವಿಚಾರಣೆ ಅಂತಾ ಸಾಫ್ಟ್‌ವೇರ್‌ ಉದ್ಯಮಿ ನಿನ್ನೆ ಊರಿನತ್ತ ಪ್ರಯಾಣ ಬೆಳೆಸಿದ್ರು. ಕುಟುಂಬ ಸಮೇತರಾಗಿ ತಮ್ಮ ವೋಲ್ವೋ ಕಾರ್‌ ಹತ್ತಿದವರು, ಬೆಳಗ್ಗೆ 11 ಗಂಟೆ ಹೊತ್ತಿಗೆ ನೆಲಮಂಗಲ ಬಳಿ ಬಂದಿದ್ರು. ಆಗ್ಲೇ ನೋಡಿ ಕಂಟೇನರ್‌ ರೂಪದಲ್ಲಿ ಬಂದಿದ್ದ ಜವರಾಯ ಇವರ ಕಾರ್‌ ಮೇಲೆ ಅಪ್ಪಳಿಸಿದ್ದ. 51 ಟನ್‌ ತೂಕದ ಕಂಟೇನರ್‌ ಉರುಳುತ್ತಿದ್ದಂತೆ ಚಂದ್ರಮ್‌ ಸೇರಿದಂತೆ ಎಲ್ಲಾ ಆರು ಜನ್ರು ಕಾರ್‌ನಲ್ಲೇ ಪ್ರಾಣ ಬಿಟ್ಟಿದ್ರು. ಅಪಘಾತಕ್ಕೂ ಮುನ್ನ ಚಂದ್ರಮ್‌ ಕುಟುಂಬ ಸಮೇತರಾಗಿ ಪ್ರಯಾಣ ಮಾಡ್ತಿರೋ ಕೊನೆ ದೃಶ್ಯ ಟೋಲ್‌ನ ಸಿಸಿ ಕ್ಯಾಮಾರದಲ್ಲಿ ಸೆರೆ ಆಗಿದೆ. ಚಂದ್ರಮ್‌ ಅವರೇ ಕಾರು ಚಲಾಯಿಸ್ತಿರೋದು ಕಾಣ್ತಿದೆ.

ಇದನ್ನೂ ಓದಿ: ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ ಇಲ್ಲಿದೆ