ನೆಲಮಂಗಲ ಪ್ರೇಮಿಗಳ ಮದುವೆಗೆ ಅಲ್ಲಿನ ಪೊಲೀಸರೇ ಸಾಕ್ಷಿ, ಅವರ ಸಮಕ್ಷಮದಲ್ಲೇ ಲಗ್ನ!
ಪ್ರೇಮಿಗಳು ನೆಲಮಂಗಲದ ಪೊಲೀಸರ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಂಡಾಗ ಅವರು ಸೋಮವಾರ ರಾತ್ರಿ ರಾಣೆಯಲ್ಲೇ ತಾಳಿ ಕಟ್ಟಿಸಿ ಹಾರ ವಿನಿಮಯ ಮಾಡಿಸಿ ಲಗ್ನ ಕಾರ್ಯ ನೆರವೇರಿಸಿದ್ದಾರೆ.
ನೆಲಮಂಗಲ: ಪೊಲೀಸರು ಕಳ್ಳಕಾಕರನ್ನು, ಖದೀಮರನ್ನು, ರೌಡಿಗಳನ್ನು ಮಟ್ಟ ಹಾಕುವುದರ ಜೊತೆಗೆ ಮದುವೆ ಪೌರೋಹಿತ್ಯವನ್ನೂ ವಹಿಸುತ್ತಾರೆ ಮಾರಾಯ್ರೇ. ಅದಕ್ಕೆ ಈ ನವವಿವಾಹಿತ (newly weds) ಜೋಡಿಯೇ ಸಾಕ್ಷಿ. ವಿಷಯವೇನೆಂದರೆ, ನೆಲಮಂಗಲದಲ್ಲಿ ವಾಸವಾಗಿರುವ ದಾವಣಗೆರೆಯ (Davanagere) ಕರುಬಸ್ಸಪ್ಪ ಮತ್ತು ಕಾರವಾರದ ಬಿಂದು (Bindu) ಪರಸ್ಪರ ಪ್ರೀತಿಸುತ್ತಿದ್ದರು ಆದರೆ ಮದುವೆಗೆ ಯುವತಿ ಕುಟುಂಬದ ವಿರೋಧವಿತ್ತು. ಪ್ರೇಮಿಗಳು ನೆಲಮಂಗಲದ ಪೊಲೀಸರ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಂಡಾಗ ಅವರು ಸೋಮವಾರ ರಾತ್ರಿ ರಾಣೆಯಲ್ಲೇ ತಾಳಿ ಕಟ್ಟಿಸಿ ಹಾರ ವಿನಿಮಯ ಮಾಡಿಸಿ ಲಗ್ನ ಕಾರ್ಯ ನೆರವೇರಿಸಿದ್ದಾರೆ.
Latest Videos