ಶುಗರ್ ಇದೆ, ವಯಸ್ಸೂ 75 ವರ್ಷ ಆಯಿತು; ಇನ್ನೆಷ್ಟು ದಿನ ಇರ್ತೀನೋ ಗೊತ್ತಿಲ್ಲ: ಸಿದ್ದರಾಮಯ್ಯ

ಶುಗರ್ ಇದೆ, ವಯಸ್ಸೂ 75 ವರ್ಷ ಆಯಿತು; ಇನ್ನೆಷ್ಟು ದಿನ ಇರ್ತೀನೋ ಗೊತ್ತಿಲ್ಲ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 10:35 AM

ನೀವೆಲ್ಲ ಕಾಂಗ್ರೆಸ್ ಗೆ ವೋಟು ಹಾಕದೆ ತಾವು ಮುಖ್ಯಮಂತ್ರಿ ಆಗೋದು ಸಾಧ್ಯವೇ? ಅಂತ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಬೇಕೆನ್ನುವ ಆಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಂಪೂರ್ಣವಾಗಿ ಚುನಾವಣಾ ಮೂಡ್ ನಲ್ಲಿದ್ದಾರೆ. ಅವರು ಕೋಲಾರ (Kolar) ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವುದು ಹೆಚ್ಚು ಕಡಿಮೆ ನಿಶ್ಚಿತವಾದಂತಿದೆ. ಮಂಗಳವಾರ ಅವರು ತಮ್ಮ ತವರು ಜಿಲ್ಲೆಯಲ್ಲಿ ಓಡಾಡುತ್ತಿದ್ದರು ಮತ್ತು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಗೆಲ್ಲಿಸಲೇಬೇಕೆಂದು ಭಾವನಾತ್ಮಕವಾಗಿ ಆಗ್ರಹಿಸುತ್ತಿದ್ದರು. ತಮಗೀಗ 75 ವರ್ಷ ಆಗಿದೆ, ಶುಗರ್ ಇದೆ, ಇನ್ನೆಷ್ಟು ವರ್ಷ ಬದುಕಬಲ್ಲೆ ಅಂತ ಹೇಳಿ, ಜನ ಮುಖ್ಯಮಂತ್ರಿ (chief minister) ಆಗಬೇಕು ಅನ್ನುತ್ತಾರೆ, ನೀವೆಲ್ಲ ಕಾಂಗ್ರೆಸ್ ಗೆ ವೋಟು ಹಾಕದೆ ತಾವು ಮುಖ್ಯಮಂತ್ರಿ ಆಗೋದು ಸಾಧ್ಯವೇ? ಅಂತ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಬೇಕೆನ್ನುವ ಆಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು. ಅವರೊಬ್ಬ ಚಾಣಾಕ್ಷ ರಾಜಕಾರಣಿ ಅಂತ ಅರ್ಥಮಾಡಿಕೊಳ್ಳಲು ಇಷ್ಟು ಸಾಕು!