ನೇಪಾಳದಲ್ಲಿ ಭಾರೀ ಹಿಮಪಾತ; 4 ಮೃತದೇಹಗಳ ಪತ್ತೆ, 12 ಜನ ನಾಪತ್ತೆ
ಪರ್ವತಾರೋಹಿಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದ ನೇಪಾಳಿ ಸಿಬ್ಬಂದಿ ತಂಗಿದ್ದ ಟೆಂಟ್‌ಗಳು ಹಿಮದಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿವೆ. ಪತ್ತೆಯಾದ 4 ಮೃತದೇಹಗಳನ್ನು ಛೇಬಿ ಭೋಟೆ, ಪಸಾಂಗ್ ಭೋಟೆ, ಬಿರೇಂದ್ರ ಗುರುಂಗ್ ಮತ್ತು ಘನ್ ಶ್ಯಾಮ್ ರೈ ಎಂದು ಗುರುತಿಸಲಾಗಿದೆ. ಕಠ್ಮಂಡುವಿನಿಂದ ಆಗಮಿಸಿರುವ 14 ಸದಸ್ಯರ ರಕ್ಷಣಾ ತಂಡವು ಹೆಲಿಕಾಪ್ಟರ್ ಮತ್ತು ವಿಶೇಷ ಉಪಕರಣಗಳ ಸಹಾಯದಿಂದ ಹಿಮದಡಿಯಲ್ಲಿ ಹೂತುಹೋಗಿರುವ ಉಳಿದ 12 ಮಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಕಠ್ಮಂಡು, ಸೆಪ್ಟೆಂಬರ್ 28: ನೇಪಾಳದ ಹಿಮ್ಲುಂಗ್ ಹಿಮಾಲ್ ಶೃಂಗದ ಬೇಸ್ ಕ್ಯಾಂಪ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೆ 4 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 12 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದ ಮನಾಂಗ್ ಜಿಲ್ಲೆಯ ನಾರ್ ಫೂ ಪ್ರದೇಶದಲ್ಲಿರುವ 7,126 ಮೀಟರ್ ಎತ್ತರದ ಹಿಮ್ಲುಂಗ್ ಹಿಮಾಲ್ ಶೃಂಗದ ಮೂಲ ಶಿಬಿರಕ್ಕೆ ಭೀಕರ ಹಿಮಪಾತ ಅಪ್ಪಳಿಸಿತ್ತು.
ಪರ್ವತಾರೋಹಿಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದ ನೇಪಾಳಿ ಸಿಬ್ಬಂದಿ ತಂಗಿದ್ದ ಟೆಂಟ್‌ಗಳು ಹಿಮದಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿವೆ. ಪತ್ತೆಯಾದ 4 ಮೃತದೇಹಗಳನ್ನು ಛೇಬಿ ಭೋಟೆ, ಪಸಾಂಗ್ ಭೋಟೆ, ಬಿರೇಂದ್ರ ಗುರುಂಗ್ ಮತ್ತು ಘನ್ ಶ್ಯಾಮ್ ರೈ ಎಂದು ಗುರುತಿಸಲಾಗಿದೆ. ಕಠ್ಮಂಡುವಿನಿಂದ ಆಗಮಿಸಿರುವ 14 ಸದಸ್ಯರ ರಕ್ಷಣಾ ತಂಡವು ಹೆಲಿಕಾಪ್ಟರ್ ಮತ್ತು ವಿಶೇಷ ಉಪಕರಣಗಳ ಸಹಾಯದಿಂದ ಹಿಮದಡಿಯಲ್ಲಿ ಹೂತುಹೋಗಿರುವ ಉಳಿದ 12 ಮಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ