AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಂಡೀಸ್ ಪಡೆ ಪಲ್ಟಿ: ಇತಿಹಾಸ ನಿರ್ಮಿಸಿದ ನೇಪಾಳ

ವಿಂಡೀಸ್ ಪಡೆ ಪಲ್ಟಿ: ಇತಿಹಾಸ ನಿರ್ಮಿಸಿದ ನೇಪಾಳ

ಝಾಹಿರ್ ಯೂಸುಫ್
|

Updated on: Sep 30, 2025 | 7:26 AM

Share

Nepal vs West Indies: ಈ ಪಂದ್ಯದಲ್ಲಿ ಮೊದಲು ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 17.1 ಓವರ್‌ಗಳಲ್ಲಿ ಕೇವಲ 83 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನೇಪಾಳ ತಂಡ 90 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ನೇಪಾಳ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ನೇಪಾಳ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ವಿಶೇಷ ಎಂದರೆ ಇದು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧದ ನೇಪಾಳ ತಂಡದ ಮೊದಲ ಸರಣಿ ಗೆಲುವು. ಈ ಗೆಲುವಿನೊಂದಿಗೆ ನೇಪಾಳ ತಂಡವು ಹೊಸ ಇತಿಹಾಸ ರಚಿಸಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 17.1 ಓವರ್‌ಗಳಲ್ಲಿ ಕೇವಲ 83 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನೇಪಾಳ ತಂಡ 90 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ 19 ರನ್ ಗಳ ಗೆಲುವು ದಾಖಲಿಸಿತ್ತು. ಇದೀಗ 90 ರನ್ ಗಳ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್ , ಅಕೀಮ್ ಅಗಸ್ಟೆ , ಕೀಸಿ ಕಾರ್ಟಿ , ಅಮೀರ್ ಜಾಂಗೂ (ವಿಕೆಟ್ ಕೀಪರ್) , ಜ್ಯುವೆಲ್ ಆಂಡ್ರ್ಯೂ , ಜೇಸನ್ ಹೋಲ್ಡರ್ , ಫ್ಯಾಬಿಯನ್ ಅಲೆನ್ , ಅಕೇಲ್ ಹೊಸೇನ್ (ನಾಯಕ) , ನವೀನ್ ಬಿಡೈಸಿ , ಓಬೆಡ್ ಮೆಕಾಯ್ , ರಾಮನ್ ಸಿಮಂಡ್ಸ್.

ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್ ಕೀಪರ್) , ರೋಹಿತ್ ಪೌಡೆಲ್ (ನಾಯಕ) , ಸಂದೀಪ್ ಜೋರಾ , ದೀಪೇಂದ್ರ ಸಿಂಗ್ ಐರಿ , ಕುಶಾಲ್ ಮಲ್ಲಾ , ಕರಣ್ ಕೆಸಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ , ನಂದನ್ ಯಾದವ್ , ಲಲಿತ್ ರಾಜಬಂಶಿ.