ನೇಪಾಳದ ಪ್ರವಾಹದ ಮೃತರ ಸಂಖ್ಯೆ 579ಕ್ಕೆ ಏರಿಕೆ; ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ಜನರು
ನೇಪಾಳದ ಭೀಕರ ಪ್ರವಾಹ ಹಾಗೂ ಭೂಕುಸಿತದ 579 ಜನರು ಪ್ರಾಣ ಕಳೆದುಕೊಂಡಿದ್ದಾರೆ. 1000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಪಡೆಗಳು ಜೀವಂತವಾಗಿರುವವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಜಲವಿದ್ಯುತ್ ಯೋಜನೆಯ ಸುರಂಗವೊಂದರಲ್ಲಿ ಸುಮಾರು 100 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸರೋವರದ ನೀರು ಉಕ್ಕಿ ಹರಿಯುವ ಅಪಾಯ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದ ನಂತರ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಈ ಪ್ರವಾಹದಿಂದ ಇದುವರೆಗೂ 1,545 ಜನರನ್ನು ರಕ್ಷಿಸಲಾಗಿದೆ. ಅತ್ಯಂತ ಭೀಕರವಾಗಿ ಬಾಧಿತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕಠ್ಮಂಡು, ಆಗಸ್ಟ್ 28: 2 ದಿನಗಳ ಹಿಂದೆ ನೇಪಾಳದ (Nepal Flood) ಭೋಟೆಕೋಶಿ ಮತ್ತು ತ್ರಿಶೂಲಿ ನದಿ ಪ್ರದೇಶಗಳಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಭೂಕುಸಿತದ 579 ಜನರು ಪ್ರಾಣ ಕಳೆದುಕೊಂಡಿದ್ದಾರೆ. 1000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಪಡೆಗಳು ಜೀವಂತವಾಗಿರುವವರಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿವೆ. ಜಲವಿದ್ಯುತ್ ಯೋಜನೆಯ ಸುರಂಗವೊಂದರಲ್ಲಿ ಸುಮಾರು 100 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸರೋವರದ ನೀರು ಉಕ್ಕಿ ಹರಿಯುವ ಅಪಾಯ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದ ನಂತರ, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಈ ಪ್ರವಾಹದಿಂದ ಇದುವರೆಗೂ 1,545 ಜನರನ್ನು ರಕ್ಷಿಸಲಾಗಿದೆ. ಅತ್ಯಂತ ಭೀಕರವಾಗಿ ಬಾಧಿತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಇದರ ನಡುವೆ, ಪ್ರವಾಹದ ನೀರಿನಿಂದ ಸುತ್ತುವರೆದ ಬಹುಮಹಡಿ ಕಟ್ಟಡವೊಂದರಲ್ಲಿ ಸಿಲುಕಿರುವ ಜನರು ದ್ವೀಪದಂತಾಗಿರುವ ತಮ್ಮ ಮನೆಯಲ್ಲಿ ಸಹಾಯಕ್ಕಾಗಿ ಕಾದು ನಿಂತಿರುವ ವಿಡಿಯೋ ಎಂಥವರಲ್ಲೂ ಭಯ ಹುಟ್ಟಿಸುವಂತಿದೆ. ಆ ಮನೆ ಯಾವಾಗ ಬೇಕಾದರೂ ಕೊಚ್ಚಿಹೋಗುವ ಭೀತಿ ಎದುರಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ