AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದ ಸಂಸತ್ತಿಗೆ ನುಗ್ಗಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ನೇಪಾಳದ ಸಂಸತ್ತಿಗೆ ನುಗ್ಗಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಸುಷ್ಮಾ ಚಕ್ರೆ
|

Updated on: Sep 09, 2025 | 3:22 PM

Share

ನೇಪಾಳದ ಸಂಸತ್ ಕಟ್ಟಡಕ್ಕೆ ಬೆಂಕಿ ಹಚ್ಚಿದರೂ ಸಹ, ಸಾವಿರಾರು ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮತ್ತು ಪ್ರದೇಶದಲ್ಲಿ ಧ್ವಜಗಳನ್ನು ಎತ್ತುತ್ತಾ ಇದ್ದರು ಎಂದು ದೃಶ್ಯಗಳು ತೋರಿಸಿವೆ. ಪ್ರತಿಭಟನಾಕಾರರು ಸಿಂಘಾ ದರ್ಬಾರ್ ಆವರಣವನ್ನು ಪ್ರವೇಶಿಸಿ, ಅದರ ಪಶ್ಚಿಮ ದ್ವಾರದ ಮೂಲಕ ಪ್ರದೇಶವನ್ನು ಭೇದಿಸಿದರು. ಅವರು ನೇಪಾಳದ ಕೇಂದ್ರ ಆಡಳಿತ ಸಂಕೀರ್ಣಕ್ಕೆ ಬಲವಂತವಾಗಿ ನುಗ್ಗುವಾಗ ಗೇಟ್‌ಗೆ ಬೆಂಕಿ ಹಚ್ಚಿದರು ಎಂದು ವರದಿಯಾಗಿದೆ.

ಕಠ್ಮಂಡು, ಸೆಪ್ಟೆಂಬರ್ 9: ನೇಪಾಳದ (Nepal Protests) ಪಾಲಿಗೆ ಇಂದು ಕರಾಳ ದಿನ. ದೇಶದಲ್ಲಿ ಸೋಷಿಯಲ್ ಮೀಡಿಯಾ ನಿಷೇಧಿಸಿದ್ದನ್ನು (Social Media Ban) ಖಂಡಿಸಿ ಆರಂಭವಾದ ಪ್ರತಿಭಟನೆ ಇಂದು ದೇಶದ ಸರ್ಕಾರವನ್ನೇ ಪತನಗೊಳಿಸಿದೆ. ಈ ಹಿಂದೆ ಬಾಂಗ್ಲಾದೇಶದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಣ್ಣದಾಗಿ ಶುರುವಾದ ಪ್ರತಿಭಟನೆಯೊಂದು ಹಿಂಸಾಚಾರದ ರೂಪಕ್ಕೆ ತಿರುಗಿ ಪ್ರಧಾನಿಯ ರಾಜೀನಾಮೆಗೆ ಕಾರಣವಾಗಿದೆ. ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲವೇ ನಿಮಿಷಗಳ ಮೊದಲು ಪ್ರತಿಭಟನಾಕಾರರು ಸಂಸತ್ತಿಗೆ ನುಗ್ಗಿ ಆ ಆವರಣದಲ್ಲಿರುವ ಒಂದು ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಬೂದು ಮತ್ತು ಕಪ್ಪು ಹೊಗೆ ಸಂಸತ್ ಕಟ್ಟಡವನ್ನು ಆವರಿಸಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಸಾವಿರಾರು ಪ್ರತಿಭಟನಾಕಾರರು ಸಂಸತ್ತಿಗೆ ನುಗ್ಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ