AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಚಿವ ಪರಮೇಶ್ವರ್​ರನ್ನು ಭೇಟಿಯಾದ ನೂತನ ಪ್ರಭಾರಿ ಡಿಜಿ-ಐಜಿಪಿ ಡಾ ಎಂಎ ಸಲೀಂ

ಗೃಹ ಸಚಿವ ಪರಮೇಶ್ವರ್​ರನ್ನು ಭೇಟಿಯಾದ ನೂತನ ಪ್ರಭಾರಿ ಡಿಜಿ-ಐಜಿಪಿ ಡಾ ಎಂಎ ಸಲೀಂ

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2025 | 11:23 AM

Share

ನೂತನ ಡಿಜಿ-ಐಜಿಪಿ ಡಾ ಎಂಎ ಸಲೀಂ ಅವರು ಗೃಹ ಸಚಿವರನ್ನು ಭೇಟಿಯಾಗಿದ್ದು ಶಿಷ್ಟಾಚಾರದ ಭಾಗವಾಗಿದೆ. ಡಿಜಿ-ಐಜಿಪಿ ಮತ್ತು ಮತ್ತು ನಗರದ ಪೊಲೀಸ್ ಕಮೀಶನರ್ ಆಗಿ ನೇಮಕಗೊಂಡವರು ಅಧಿಕಾರವಹಿಸಿಕೊಂಡ ನಂತರ ಗೃಹ ಸಚಿವರನ್ನು ಭೇಟಿಯಾಗುವುದು ಶಿಷ್ಟಾಚಾರ. ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನೂ ಅವರು ಭೇಟಿಯಾಗುತ್ತಾರೆ.

ಬೆಂಗಳೂರು, ಮೇ 22: ನಿನ್ನೆ ನಿವೃತ್ತರಾದ ಅಲೋಕ್ ಮೋಹನ್ (Alok Mohan) ಅವರಿಂದ ಬೇಟನ್ ಸ್ವೀಕರಿಸಿದ ರಾಜ್ಯದ ನೂತನ ಪ್ರಭಾರಿ ಡಿಜಿ-ಐಜಿಪಿ ಡಾ ಎಂಎ ಸಲೀಂ ಅವರು ಇಂದು ಬೆಳಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರ ನಿವಾಸಕ್ಕೆ ತೆರಳಿ ಬೋಕೆ ನೀಡಿದರು. ಪೊಲೀಸ್ ಅಧಿಕಾರಿ ಬೋಕೆಯನ್ನು ಹಿಡಿದು ಸಚಿವರ ನಿವಾಸದೊಳಗೆ ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರು ಒಳಗೆ ಹೋಗುವಾಗ ಮಾಧ್ಯಮದವರು ಬೈಟ್ ಗಾಗಿ ಅಪ್ರೋಚ್ ಮಾಡುತ್ತಾರೆ. ಅದರೆ, ಸಲೀಂ ಮುಗಳ್ನಕ್ಕು ಹೊರಡುತ್ತಾರೆ. ಸಚಿವರನ್ನು ಭೇಟಿಯಾಗಿ ಹೊರಬಂದ ಬಳಿಕವೂ ಅವರು ಮಾಧ್ಯಮಗಳೊಡನೆ ಮಾತಾಡಲ್ಲ.

ಇದನ್ನೂ ಓದಿ:  ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ