ನೂತನ ಲೋಕಾಯುಕ್ತ ಮುಂದಿರುವ ಸವಾಲೇನು? ಭ್ರಷ್ಟರ ಬೇಟೆಗೆ ಮುನ್ನುಗ್ಗುವ ಮುನ್ನ ಏನೇನು ಅಡ್ಡಿ ಆತಂಕಗಳಿವೆ? ಟಿವಿ 9 ಚರ್ಚೆ
Lokayukta BS Patil: ಭ್ರಷ್ಟರನ್ನು ಬಡಿದುಹಾಕುವ ಕೆಲಸ ಲೋಕಾಯುಕ್ತಕ್ಕೆ ಅಷ್ಟು ಸುಲಭವಲ್ಲ. ಲೋಕಾಯುಕ್ತ ತನ್ನದೇ ಆದ ಸಮಸ್ಯೆ, ಅಡೆತಡೆಗಳನ್ನು ಎದುರಿಸುತ್ತಿದೆ. ಮೊದಲು ಲೋಕಾಯುಕ್ತದ ಮುಂದಿರುವ ಇಂತಹ ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಅದಾದ ಮೇಲಷ್ಟೇ ಲೋಕಾಯುಕ್ತರು ಫೀಲ್ಡ್ಗೆ ಇಳಿಯಬೇಕಾಗುತ್ತೆ.
ಇಡೀ ದೇಶಕ್ಕೆ ಮಾದರಿಯಾಗುವಂತೆ ಭ್ರಷ್ಟಾಚಾರಿಗಳಿಗೆ ಚಳಿ ಬಿಡಿಸಲು ಲೋಕಾಯುಕ್ತ ಎಂಬ ಸಂಸ್ಥೆಯನ್ನು ಮೊದಲು ಹುಟ್ಟುಹಾಕಿದ್ದೇ ಕರ್ನಾಟಕದಲ್ಲಿ. ಅದಾದಮೇಲೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಲೋಕಾಯುಕ್ತರಾದ ಕೆಲ ನ್ಯಾಯಮೂರ್ತಿಗಳು ಸಂಸ್ಥೆಯ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿದರು ಎಂದರೆ ಅತಿಶಯೋಕ್ತಿಯೇನೂ ಇಲ್ಲ. ಈ ಮಧ್ಯೆ ಲೋಕಾಯುಕ್ತರ ಸಂಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನವೂ ನಡೆಯಿತು. ಕೆಲ ಬಾರಿ ಲೋಕಾಯುಕ್ತ ಎಂಬುದು ಹಲ್ಲಿಲ್ಲದ ಹಾವಿನಂತೆ ತೆವಳುತ್ತಾ ಸಾಗಿದ್ದೂ ಉಂಟು. ಈ ಮಧ್ಯೆ, ನಿನ್ನೆಯಷ್ಟೇ ಹೊಸ ಲೋಕಾಯುಕ್ತರು ನೇಮಕಗೊಂಡಿದ್ದಾರೆ. ಮುಂದೆಯಾದರೂ ಲೋಕಾಯುಕ್ತ ತನ್ನ ಗತವೈಭವ ಕಂಡುಕೊಂಡು, ಭ್ರಷ್ಟರಿಗೆ ಸಿಂಹಸ್ವಪ್ನವಾಗುತ್ತದಾ? ಕಾದು ನೋಡುವ.
ಇನ್ನು, ಕರ್ನಾಟಕದ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಭ್ರಷ್ಟರನ್ನು ಬಡಿದುಹಾಕುವ ಕೆಲಸ ಲೋಕಾಯುಕ್ತಕ್ಕೆ ಅಷ್ಟು ಸುಲಭವಲ್ಲ. ಲೋಕಾಯುಕ್ತ ತನ್ನದೇ ಆದ ಸಮಸ್ಯೆ, ಅಡೆತಡೆಗಳನ್ನು ಎದುರಿಸುತ್ತಿದೆ. ಮೊದಲು ಲೋಕಾಯುಕ್ತದ ಮುಂದಿರುವ ಇಂತಹ ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಅದಾದ ಮೇಲಷ್ಟೇ ಲೋಕಾಯುಕ್ತರು ಫೀಲ್ಡ್ಗೆ ಇಳಿಯಬೇಕಾಗುತ್ತೆ. ಇದನ್ನು ಹೊಸ ಲೋಕಾಯುಕ್ತರಾದ ಬಿ.ಎಸ್. ಪಾಟೀಲ್ ಅವರು ಚೆನ್ನಾಗಿ ಬಲ್ಲರು. ಅನುಭವ ಅವರ ಬೆನ್ನಿಗಿದೆ. ಜೊತೆಗೆ ಅವರು ಉಪ ಲೋಕಾಯುಕ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದವರು.
ಇದನ್ನು ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣ; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್
ಸಂಸ್ಥೆ ಏನು, ಅದರ ಕಾರ್ಯವ್ಯಾಪ್ತಿಯೇನು? ಅದಕ್ಕೆ ಇರುವ ಅಡೆತಡೆಗಳು ಏನು ಎಂಬುದನ್ನು ಚೆನ್ನಾಗಿ ಬಲ್ಲರು. ಅದನ್ನೆಲ್ಲ ಅರ್ಥೈಸಿಕೊಂಡು ಅವರು ಭ್ರಷ್ಟರ ಬೇಟೆಯಲ್ಲಿ ಮುನ್ನುಗ್ಗಬೇಕಿದೆ. ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತಾ, ಅವರು ಎದುರಿಗಿರುವ ಸವಾಲುಗಳೇನು ಎಂಬುದನ್ನು ಮೊದಲ ದಿನವೇ ಚರ್ಚಿಸಿ, ಸಾರ್ವಜನಿಕರ ಮುಂದೆ ಅದನ್ನು ತೆರೆದಿಡುವ ಜರೂರತ್ತು ಇದೆ. ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಚಂದ್ರಮೋಹನ್ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
ಇದನ್ನು ಓದಿ:
5G Technology In India: ಭಾರತದಲ್ಲಿ ಸದ್ಯದಲ್ಲೇ 5G ಸಂಪರ್ಕ ಸೇವೆ ಲಭ್ಯ!
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.